ಪುಣೆ,ಮೇ.10: ಥಾಣೆಯ ಮಲಿನ ನೀರು ಸಂಸ್ಕರಣಾ ಪ್ಲಾಂಟ್ಗೆ ಇಳಿದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಧೋಕಲಿ ಏರಿಯದ ಪ್ರೈಡ್ ಪ್ರಸಿಡೆನ್ಸಿ ಲಕ್ಸೂರಿಯ ಎಂಬ ವಾಸ್ತವ್ಯ ಸಮುಚ್ಚದ ಮಲಿನ ನೀರು ಶುಚೀಕರಣ ಪ್ಲಾಂಟನ್ನು ಶುಚಿಗೊಳಿಸುವ ವೇಳೆ ದುರಂತ ನಡೆದಿದೆ. ಹರಿಯಾಣದ ಅಮಿತ್ ಪುಹೋಲ್(20), ಅಮನ್ ಬಾದಲ್(21), ಅಜಯ್ ಭೂಂಬಕ್(24) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಐದು ಮಂದಿಯನ್ನು ರಕ್ಷಿಸಲಾಗಿದೆ. ಶುಕ್ರವಾರ ಬೆಳಗ್ಗೆ ಅಪಘಾತ ನಡೆದಿದ್ದು ಎಂಟು ಮಂದಿ 130 ಕ್ಯೂಬಿಕ್ ಮೀಟರ್ ಆಳದ ಪ್ಲಾಂಟ್ಗೆ ಇಳಿದಿದ್ದರು. ವಿಷಾನಿಲ ಉಸಿರಾಟದಲ್ಲಿ ವಿವಶರಾದ ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನ ನಡೆಸಲಾಯಿತು. ಆದರೆ ಮೂರು ಮಂದಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ರಕ್ಷಿಸಿದವರಲ್ಲೇ ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಸುರಕ್ಷಾ ಪೂರ್ವ ಸಿದ್ಧತೆ ಇಲ್ಲದೆ ಕಾರ್ಮಿಕರು ಫ್ಲಾಂಟ್ನೊಳಗೆ ಇಳಿದಿದ್ದರು ಎಂದು ರಕ್ಷಣಾ ಕಾರ್ಯ ನಿರ್ವಹಿಸಿದ ಥಾಣೆ ಮುನ್ಸಿಪಲ್ ಕಾರ್ಪೊರೇಷನ್ನ ಅಧಿಕಾರಿ ತಿಳಿಸಿದ್ದಾರೆ.












