ಇರಾನ್ ವಿರುದ್ಧ ಜರ್ಮನಿ ಕೆಂಡಾಮಂಡಲ; ಎಲ್ಲಾ ದೂತಾವಾಸ ಮುಚ್ಚಲು ಕರೆ

0
609

ಸನ್ಮಾರ್ಗ ವಾರ್ತೆ

ಇಸ್ರೇಲ್ ವಿರುದ್ಧ ಜಿದ್ದಾಜಿದ್ದಿ ಎದುರಿಸುತ್ತಿರುವ ಇರಾನ್, ಈಗ ಜರ್ಮನಿಯೊಂದಿಗೆ ಹೊಸ ಸಂಕಷ್ಟಕ್ಕೆ ಸಿಲುಕಿದೆ. ದುಬೈನಿಂದ ಅಪಹರಿಸಿದ ಜರ್ಮನ್ ಕೈದಿ ಜಮ್ಶಿದ್ ಶರ್ಮದ್ ಅವರನ್ನು ಇರಾನ್ ಭದ್ರತಾ ಪಡೆಗಳು ಗಲ್ಲಿಗೇರಿಸಿದ್ದು, ಇದರಿಂದ ಜರ್ಮನಿಯು ಕೆಂಡಾಮಂಡಲವಾಗಿದೆ.

ಜರ್ಮನಿಯು ತನ್ನ ದೇಶದಲ್ಲಿ ಇರುವ ಎಲ್ಲಾ ಮೂರು ಇರಾನ್ ದೂತಾವಾಸ, ರಾಯಭಾರಿ ಕಚೇರಿಗಳನ್ನು ಮುಚ್ಚುವಂತೆ ಆದೇಶಿಸಿದೆ. ಜರ್ಮನಿಯ ಸಚಿವರು ಶರ್ಮದ್ ಅವರ ಹತ್ಯೆಗೆ ಖಂಡನೆ ವ್ಯಕ್ತಪಡಿಸಿದ್ದು ಇದು ಉಭಯ ರಾಷ್ಟ್ರಗಳ ಸಂಬಂಧದ ಮೇಲೆ ಬಲವಾದ ಪರಿಣಾಮ ಬೀರುವ ಸಾಧ್ಯತೆ ಇದೆ.

ಭಯೋತ್ಪಾದನೆಯ ಆರೋಪ ಹೊತ್ತಿರುವ
ಜಮ್ಶಿದ್ ಶರ್ಮದ್, 2020ರಲ್ಲಿ ದುಬೈನಲ್ಲಿ ಅಪಹರಣಗೊಂಡಿದ್ದರು. ಇರಾನ್ ಅವರ ವಿರುದ್ಧ ಭಯೋತ್ಪಾದನೆಯ ಆರೋಪಗಳನ್ನು ಹೊರಿಸಿತ್ತು.

ಭಯೋತ್ಪಾದನೆ ಆರೋಪದ ಮೇಲೆ 69 ವರ್ಷದ ಶರ್ಮದ್‌ಗೆ ಸೋಮವಾರ ಮರಣದಂಡನೆ ವಿಧಿಸಲಾಗಿದೆ ಎಂದು ಇರಾನ್ ನ್ಯಾಯಾಂಗ ತಿಳಿಸಿದೆ. 2023 ರಲ್ಲಿ ಈ ಬಗ್ಗೆ ವಿಚಾರಣೆಯನ್ನು ನಡೆಸಲಾಗಿದ್ದು , ಅಮೆರಿಕ ಮತ್ತು ಅಂತರರಾಷ್ಟ್ರೀಯ (ಮಾನವ ಹಕ್ಕುಗಳು) ಸಂಸ್ಥೆಗಳು ಈ ವಿಚಾರಣೆಯನ್ನು ನಾಟಕ ಎಂದು ತಿರಸ್ಕರಿಸಿದ್ದವು.