ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ವಶ

0
552

ಗಟ್ಟಾಲ್,ಮೇ 11: ಪಶ್ಚಿಮ ಬಂಗಾಳದ ಗಟ್ಟಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್‍ರ ಕಾರು ತಪಾಸಣೆ ನಡೆಸಿದಾಗ 1.13 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಘೋಷ್ ಹಣ ಸಾಗಿಸುತ್ತಿದ್ದಾರೆ ಎಂಬ ವಿವರದ ಆಧಾರದಲ್ಲಿ ತಪಾಸಣೆ ನಡೆಸಲಾಯಿತು. ಈ ಹಣವನ್ನು ಎಲ್ಲಿಗೆ ಒಯ್ಯುತ್ತಿದ್ದೀರಿ ಎಂದು ಅಧಿಕಾರಿಗಳು ಕೇಳಿದಾಗ ಘೋಷ್‍ರಿಗೆ ವಿವರಿಸಲು ಆಗಲಿಲ್ಲ. ಒಂದು ಗಂಟೆ ಕಾಲ ಪ್ರಶ್ನಿಸಿದ ಬಳಿಕ ಅವರನ್ನು ಬಿಟ್ಟು ಕಳುಹಿಸಲಾಯಿತು. ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದರು. ಆದರೆ ಭಾರತಿ ಘೋಷ್ ತನ್ನ ವೈಯಕ್ತಿಕ ಅಗತ್ಯತೆಗಾಗಿ ಇಟ್ಟುಕೊಂಡಿದ್ದ ಹಣವೆಂದು ಹೇಳಿಕೆ ನೀಡಿದ್ದಾರೆ.