ಆಟವಾಡುತ್ತಾ ಕಾರಿನೊಳಗೆ ಸಿಲುಕಿದ ಇಬ್ಬರು ಪುಟ್ಟಮಕ್ಕಳ ಸಾವು

0
566

ಮಸ್ಕತ್,ಮೇ 14: ಆಟವಾಡುತ್ತಾ ಕಾರಿನೊಳಗೆ ಸಿಲುಕಿದ ಇಬ್ಬರು ಸಹೋದರರು ಮೃತಪಟ್ಟಿದ್ದಾರೆ. ಮೂರು ವರ್ಷ ಮತ್ತು ಐದುವರ್ಷ ವಯಸ್ಸಿನ ಸ್ವದೇಶಿ ಮಕ್ಕಳು ಎಂದು ಒಮನ್ ರಾಯಲ್ ಪೊಲೀಸರು ತಿಳಿಸಿದರು. ಜ‌ಅ್‌ಲನ್ ಬನೀ ಬೂಆಲಿಯದಲ್ಲಿ ಕಳೆದ ರವಿವಾರ ಮಧ್ಯಾಹ್ನದ ನಂತರ ದಾರುಣ ಘಟನೆ ನಡೆದಿದೆ.

ಸೈಹ್ ಅಲ್ ಉಲ ಪ್ರದೇಶದ ಕುಟುಂಬ ಮನೆಯ ಸಮೀಪ ಪಾರ್ಕ್ ಮಾಡಿದ ವಾಹನದಲ್ಲಿ ಮಕ್ಕಳು ಸಿಕ್ಕಿಬಿದ್ದರು. ಕಾರಿನ ಹೊರಗೆ ಮಕ್ಕಳು ಆಡುತ್ತಿದ್ದರು. ಆಡುತ್ತಾ ಆಡುತ್ತಾ ಕಾರಿನ ಡೋರ್ ತೆಗೆದು ಒಳಗೆ ಹೋಗಿದ್ದಾರೆ. ನಂತರ ಕಾರಿನ ಡೋರ್ ಲಾಕ್ ಆಗಿ ಮಕ್ಕಳ ಸಾವು ಸಂಭವಿಸಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.