ಅಮೆರಿಕ: ಅಲಬಾಮದಲ್ಲಿ ಗರ್ಭಪಾತ ನಿಷೇಧ ಕಾನೂನು ಜಾರಿ; ವ್ಯಾಪಕಗೊಂಡ ವಿರೋಧಿ ಪ್ರತಿಭಟನೆ

0
496

ನ್ಯೂಯಾರ್ಕ್,ಮೇ 16: ಅಮೆರಿಕದ ರಾಜ್ಯವಾದ ಅಲಬಾಮದಲ್ಲಿ ಗರ್ಭಪಾತ ನಿಷೇಧ ಮಸೂದೆ ಜಾರಿಗೊಂಡಿದೆ. ಇಲ್ಲಿ ಇನ್ನು ಮುಂದೆ ಏಳು ಘಟ್ಟಗಳ ಗರ್ಭಪಾತ ಕ್ರಿಮಿನಲ್ ಕೃತ್ಯವೆನಿಸಿಕೊಳ್ಳುತ್ತಿದೆ. ತಾಯಿಯ ಆರೋಗ್ಯಕ್ಕೆ ತೀರಾ ಅಪಾಯವಿದ್ದರೆ ಮಾತ್ರ ಗರ್ಭಪಾತಕ್ಕೆ ಅನುಮತಿ ನೀಡಲಾಗುತ್ತದೆ. ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ ಮಹಿಳೆಗೆ ಗರ್ಭಪಾತ ಮಾಡಿಸಿಕೊಳ್ಳುವ ಅವಕಾಶವನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ.

ರಿಪಬ್ಲಿಕನ್ ಪಾರ್ಟಿ ಪ್ರಭಾವ ಇರುವ ಸೆನೆಟ್‍ನಲ್ಲಿ ಆರರ ವಿರುದ್ಧ ಇಪ್ಪತ್ತೈದು ಮತಗಳಿಂದ ಮಸೂದೆ ಪಾಸಾಗಿದೆ. ಈ ಹಿಂದೆ ಇದು ಜನಪ್ರತಿನಿಧಿಗಳ ಸಭೆಯಲ್ಲಿ ಪಾಸಾಗಿತ್ತು. ಇನ್ನು ರಾಜ್ಯಪಾಲರ ಸಹಿ ಬಿದ್ದರೆ ಕಾನೂನು ಆಗಿ ಅಸ್ತಿತ್ವ ಪಡೆಯುತ್ತದೆ. ಆದರೆ ಇದರ ವಿರುದ್ಧ ಅಲಬಾಮಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಕಾನೂನು ಉಲ್ಲಂಘಿಸುವ ವೈದ್ಯರಿಗೆ 10 ರಿಂದ 99 ವರ್ಷದ ವರೆಗಿನ ಜೈಲು ಶಿಕ್ಷೆ ಸಿಗಲಿದೆ. ಅಮೆರಿಕದ ಇತರ ರಾಜ್ಯಗಳಿಗೆ ಹೋಲಿಸಿದರೆ ಅಲಬಾಮಾದಲ್ಲಿಯೇ ಗರ್ಭಪಾತ ನಿಷೇಧವು ಕಟ್ಟುನಿಟ್ಟುಗೊಳಿಸಿರುವುದು ಕಂಡು ಬರುತ್ತಿದೆ.