ತನ್ನ ತಾಯಿ ಮತ್ತು ನಾಲ್ಕು ಮಂದಿ ಸಹೋದರಿಯರನ್ನು ಕೊಂದ ಅಸದ್: ಉತ್ತರ ಪ್ರದೇಶದಲ್ಲಿ ಭೀಕರ ಹತ್ಯೆ

0
1169

ಸನ್ಮಾರ್ಗ ವಾರ್ತೆ

ತಾಯಿ ಮತ್ತು ನಾಲ್ಕು ಸಹೋದರಿಯರನ್ನು ಭೀಕರವಾಗಿ ಹತ್ಯೆಗೈದ ಘಟನೆ ಲಕ್ನೋದಲ್ಲಿ ನಡೆದಿದ್ದು ಆರೋಪಿ ಅಸದ್ ಎಂಬವನನ್ನು ಬಂಧಿಸಲಾಗಿದೆ.

ಈ ಕೃತ್ಯದ ಬಳಿಕ ಈತ ಮೃತ ದೇಹಗಳ ಬಳಿ ನಿಂತು ವಿಡಿಯೋ ಮಾಡಿದ್ದು ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ಆಸದ್ ನ ತಂದೆಯೂ ಕಾಣಿಸುತ್ತಾರೆ. ತನ್ನ ಕುಟುಂಬಕ್ಕೆ ನೀಡಬಾರದ ಕಿರುಕುಳವನ್ನು ನೀಡಿದ ಕಾರಣಕ್ಕಾಗಿ, ತಾನು ಈ ಹತ್ಯೆ ನಡೆಸಿದ್ದೇನೆ ಎಂದು ವಿಡಿಯೋದಲ್ಲಿ ಆತ ಸಮರ್ಥಿಸಿಕೊಂಡಿದ್ದಾನೆ.

ಅವರು ನಮ್ಮ ಮನೆಗೆ ಬಂದು ನೀಡಬಾರದ ಕಿರುಕುಳವನ್ನು ನೀಡಿದರು. ನಾವು ಎಷ್ಟೇ ಬೊಬ್ಬೆ ಹೊಡೆದು ಹೇಳಿದರೂ ಅವರು ಕೇಳಲಿಲ್ಲ ನಾವು ಹಲವು ತಿಂಗಳುಗಳಿಂದ ಈ ಕಠಿಣವಾದ ಚಳಿಯಲ್ಲಿ ಅಲೆಯುತ್ತಿದ್ದೇವೆ ಎಂದು ಆತ ಹೇಳಿದ್ದಾನೆ.

ಅಫ್ತಾಬ್, ಅಲೀಮ್ ಖಾನ್, ಸಲೀಂ ಖಾನ್ ಮುಂತಾದವರು ನಮ್ಮ ಕುಟುಂಬವನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿದ್ದಾರೆ ಮತ್ತು ನನ್ನ ಸಹೋದರಿಯರನ್ನು ಮಾರಾಟ ಮಾಡಲು ಷಡ್ಯಂತ್ರ ಹೆಣೆದಿದ್ದರು ಎಂದು ಅಸದ್ ಆರೋಪಿಸಿದ್ದಾನೆ. ಇವರಿಂದ ನನ್ನ ಕುಟುಂಬವನ್ನು ರಕ್ಷಿಸುವುದಕ್ಕಾಗಿ ಕೊಲೆಪಾತಕ ಎಸಗಿದ್ದೇನೆ ಎಂದು ಆತ ಹೇಳಿದ್ದಾನೆ..

ಪೊಲೀಸರು ಮತ್ತು ರಾಜಕೀಯ ನಾಯಕರ ಬೆಂಬಲ ಸಿಗದೇ ಇರುವುದಕ್ಕೂ ಈ ವಿಡಿಯೋದಲ್ಲಿ ಅಸದ್ ನಿರಾಶೆ ವ್ಯಕ್ತಪಡಿಸಿದ್ದಾನೆ. ನಮ್ಮಲ್ಲಿ ಸರಿಯಾದ ಅಧಿಕೃತ ದಾಖಲೆಗಳು ಇರುವುದರ ಹೊರತಾಗಿಯೂ ನಮ್ಮನ್ನು ಬಾಂಗ್ಲಾದೇಶಿ ನುಸುಳುಕೋರರೆಂದು ಹೇಳಿದ್ದಾರೆ ಎಂದಾತ ಆರೋಪಿಸಿದ್ದಾನೆ. ಮಾತ್ರ ಅಲ್ಲ ನಮ್ಮ ಕುಟುಂಬ ಅನುಭವಿಸುತ್ತಿರುವ ಸಂಕಟದಿಂದ ಹೊರಬರುವುದಕ್ಕಾಗಿ ಬೇರೆ ಧರ್ಮಕ್ಕೆ ಮತಾಂತರವಾಗಲು ನಾವು ಇಚ್ಚಿಸಿರುವುದಾಗಿಯೂ ಆತ ಹೇಳಿದ್ದಾನೆ.

ನನ್ನ ಕುಟುಂಬಕ್ಕೆ ನ್ಯಾಯವನ್ನು ನೀಡಬೇಕು ಎಂದು ಆತ ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ರೊಂದಿಗೆ ಕೋರಿದ್ದಾನೆ. ಪೊಲೀಸರು ಲಂಚ ಸ್ವೀಕರಿಸುತ್ತಾರೆ ಮತ್ತು ಈ ಪ್ರದೇಶದ ಹೆಣ್ಣು ಮಕ್ಕಳನ್ನು ಅಪಹರಿಸಿಕೊಂಡು ಹೋಗಿ ಮಾರಾಟ ಮಾಡುತ್ತಿರುವುದನ್ನು ಅವರು ಗಮನಿಸುತ್ತಿಲ್ಲ ಎಂದು ಕೂಡ ಆರೋಪಿಸಿದ್ದಾನೆ.

ಲಕ್ನೋದ ಹೋಟೆಲ್ನಲ್ಲಿ ಈ ಹತ್ಯಾಕಾಂಡ ನಡೆದಿತ್ತು. ಈತ ಆಗ್ರಾದ ವ್ಯಕ್ತಿ. ಆತನ ತಾಯಿ ಅಸ್ಮ ಸಹೋದರಿಯರಾದ ಅಲಿಯ ಅಲ್ಷಿಯಾ ಮತ್ತು ರಫೀನ್ ಎಂಬವರನ್ನು ಈತ ಹತ್ಯೆ ಮಾಡಿದ್ದಾನೆ.