ಹೊಸ ವರ್ಷಾಚರಣೆ: ರಾಜ್ಯದಲ್ಲಿ ಬಂಪರ್ ಮದ್ಯ ಮಾರಾಟ

0
193

ಸನ್ಮಾರ್ಗ ವಾರ್ತೆ

ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ನೂರಾರು ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಡಿಸೆಂಬರ್ 31ರ ಮಂಗಳವಾರ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೇವಲ ಅರ್ಧ ದಿನದ ಅವಧಿಯಲ್ಲಿ ಬರೋಬರಿ 308 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆಯು ಇಡೀ ದಿನ 250 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟದ ಗುರಿ ಇಟ್ಟುಕೊಂಡಿತ್ತು. ಆದರೆ ಅರ್ಧ ದಿನದಲ್ಲೇ ಅದನ್ನು ಮೀರಿದ ವ್ಯಾಪಾರವಾಗಿದೆ ಎಂದು ತಿಳಿದು ಬಂದಿದೆ.

ಕಳೆದ ವರ್ಷ 2023ರ ಡಿಸೆಂಬರ್ 31 ರಂದು 193 ಕೋಟಿ ರೂಪಾಯಿಯ ಮದ್ಯ ಮಾರಾಟವಾಗಿತ್ತು. ಇದೇ ವೇಳೆ ಈ ಬಾರಿ ಮದ್ಯ ಖರೀದಿಗೆ ಜನವರಿ 31ಕ್ಕಿಂತ ಎರಡು ದಿನ ಮೊದಲೇ ಪೈಪೋಟಿ ನಡೆದಿತ್ತು. ಡಿಸೆಂಬರ್ 27ರಂದು ರಾಜ್ಯದಲ್ಲಿ 408 ಕೋಟಿ ರೂಪಾಯಿಯ ಮದ್ಯ ಮಾರಾಟವಾಗಿದೆ. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕುಡಿದು ಮತ್ತಿನಿಂದ ತೂರಾಡಿದ ಘಟನೆ ಮತ್ತು ಕಾನೂನು ಉಲ್ಲಂಘನೆ ಮಾಡಿದ ಘಟನೆಗಳು ವರದಿಯಾಗಿವೆ.