ರಿಯಾದ್ ಮೆಟ್ರೋ: ಈಗ ಎಲ್ಲ ಟ್ರೈನ್ ಗಳೂ ಬತಹ್ ಗೆ

0
622

ಸನ್ಮಾರ್ಗ ವಾರ್ತೆ

ಸೌದಿ ಅರೇಬಿಯಾದ ಪಾಲಿಗೆ ಬಹಳ ಮಹತ್ವಪೂರ್ಣ ಎಂದು ಹೇಳಲಾಗುತ್ತಿರುವ ರಿಯಾದ್ ಮೆಟ್ರೋ ಇದೀಗ ಮತ್ತಷ್ಟು ಜನಸ್ನೇಹಿಯಾಗಿದೆ.

ಎರಡು ಸ್ಟೇಷನ್ ಗಳು ತೆರೆದುಕೊಂಡಿದ್ದು ಇದೀಗ ರಿಯಾದ್ ನ ಯಾವುದೇ ಸ್ಟೇಷನ್ ನಲ್ಲಿ ನೀವು ಹತ್ತಿದರೂ ನಗರ ಕೇಂದ್ರವಾದ ಬತ್ತಹ್ ಗೆ ತಲುಪುತ್ತೀರಿ. ಬತ್ತಹ್ ನ ಅಲ್ ಬತ್ತಹ್ ನ್ಯಾಷನಲ್ ಸ್ಟೇಷನ್ ಗಳು ದಿನದ ಹಿಂದೆ ಚಟುವಟಿಕೆ ಪ್ರಾರಂಭಿಸಿವೆ.

ನಗರದ ಪೂರ್ವ ಪಶ್ಚಿಮ ಭಾಗಗಳನ್ನು ಜೋಡಿಸುವ ಬತಹ್ ನ ಮೂಲಕ ಸಾಗುವ 38 ಕಿಲೋಮೀಟರ್ ಉದ್ದದ ಬ್ಲೂ ಲೈನಲ್ಲಿ ಈ ಎರಡು ಸ್ಟೇಷನ್ ಗಳಿವೆ. ಪೂರ್ವ ಪಶ್ಚಿಮ ಭಾಗದ ಶಿಕ್ಷಣ ಸಚಿವಾಲಯದ ಮೂಲಕ ಸಾಗುವ 13 ಕಿಲೋಮೀಟರ್ ದೂರದ ಗ್ರೀನ್ ಲೈನ್ ನ ರೈಲು ಕೂಡ ನ್ಯಾಷನಲ್ ಮ್ಯೂಸಿಯಂ ಸ್ಟೇಷನನ್ನು ಸೇರುತ್ತಿದೆ. ಈ ಮೂಲಕ ನಗರದ ಯಾವುದೇ ಮೂಲೆಯಿಂದ ಟ್ರೈನ್ ಬಂದರು ಬತಹ್ ಗೆ ಸೇರುವ ಸನ್ನಿವೇಶ ನಿರ್ಮಾಣವಾಗಿದೆ.

ಹಾಗೆಯೇ ದಕ್ಷಿಣ ಮತ್ತು ಉತ್ತರ ಭಾಗವನ್ನು ಜೋಡಿಸುವ ಅತೀ ಉದ್ದದ ಗ್ರೀನ್ ಲೈನ್ ಕೂಡ ನೇರವಾಗಿ ಬತಹ್ ಗೆ ಬಂದು ಸೇರುತ್ತದೆ. ಪ್ರತಿದಿನ ಈ ದಾರಿಯ ಮೂಲಕ ನೂರ ತೊಂಬತ್ತು ಟ್ರೈನ್ ಗಳು ಸಂಚರಿಸುತ್ತಿವೆ. ಹೀಗೆ, 130 ಕಿಲೋಮೀಟರ್ ಸುತ್ತಳತೆಯ ರಿಯಾದ್ ಎಂಬ ಬೃಹತ್ ನಗರದ ಯಾವ ಮೂಲೆಯಿಂದ ಈ ಟ್ರೈನ್ನಲ್ಲಿ ಸಂಚರಿಸಿದರೂ ನೇರವಾಗಿ ಬತಹ್ ಗೆ ತಲುಪುವ ವ್ಯವಸ್ಥೆ ನಿರ್ಮಾಣವಾಗಿದೆ.

ಅತ್ಯಂತ ನಿಭಿಡ ನಗರವೆಂದೇ ಗುರುತಿಸಿಕೊಂಡಿರುವ ಮತ್ತು ಟ್ರಾಫಿಕ್ ಸಮಸ್ಯೆಗಾಗಿಯೂ ಬೇಸತ್ತು ಕೊಂಡಿರುವ ಜನರಿಗೆ ಈ ರಿಯಾದ್ ಮೆಟ್ರೋ ಬಹಳ ಸುಲಭ ಪ್ರಯಾಣವನ್ನು ಒದಗಿಸುತ್ತಿದೆ. ಕೇವಲ ನಾಲ್ಕು ರಿಯಾಲ್ ನೀಡುವ ಮೂಲಕ ಯಾವುದೇ ಟ್ರಾಫಿಕ್ ನ ಸಮಸ್ಯೆಯನ್ನು ಎದುರಿಸದೆ ಬತಹ್ ಗೆ ತಲುಪುವ ಸುಲಭದ ದಾರಿಯಾಗಿ ರಿಯಾದ್ ಮೆಟ್ರೋ ಇದೀಗ ಜನರನ್ನು ಆಕರ್ಷಿಸುತ್ತಿದೆ.