ಸನ್ಮಾರ್ಗ ವಾರ್ತೆ
ನವದೆಹಲಿ: ಹಿಂದು ದೇವತೆಗಳನ್ನು ಅವಮಾನಿಸಲಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಪತ್ರಕರ್ತೆ ಹಾಗು ಆಕ್ಟಿವಿಸ್ಟ್ ಆಗಿರುವ ರಾಣಾ ಅಯ್ಯೂಬ್ ಮೇಲೆ ಪ್ರಕರಣ ದಾಖಲಿಸಲು ನ್ಯಾಯಾಲಯ ಅನುಮತಿ ನೀಡಿದೆ.
ಎಕ್ಸ್ (ಟ್ವಿಟ್ಟರ್) ಪೋಸ್ಟೊಂದರಲ್ಲಿ ಹಿಂದು ದೇವತೆಗಳನ್ನು ಅವಮಾನಿಸಿರುವುದಾಗಿಯೂ ಭಾರತದ ವಿರುದ್ಧ ಪ್ರಚಾರ ನಡೆಸಿದ್ದಾಗಿಯೂ ವಕೀಲರೊಬ್ಬರು ದೂರು ನೀಡಿದ್ದಾರೆ.
ಎರಡು ವಿಭಾಗದವರು ಪರಸ್ಪರ ಪೈಪೋಟಿ ನಡೆಸುವ ಕಾರ್ಯದಲ್ಲಿ ಏರ್ಪಡುವುದು, ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವುದು ಮುಂತಾದ ತಪ್ಪುಗಳು ಮೇಲ್ನೋಟಕ್ಕೆ ಗೋಚರವಾಗಿರುವುದರಿಂದ ಚೀಫ್ ಜುಡೀಶ್ಯಲ್ ಮ್ಯಾಜಿಸ್ಟ್ರೇಟ್ ಹಿಮಶು ರಮಣ್ ಸಿಂಗ್ ಕೇಸು ದಾಖಲಿಸಲು ಪೊಲೀಸರಿಗೆ ಅನುಮತಿ ನೀಡಿದ್ದಾರೆ.
2016-17 ರಲ್ಲಿ ಹಿಂದು ದೇವರುಗಳನ್ನು ಕೆಟ್ಟದ್ದಾಗಿ ಚಿತ್ರಿಸಿದ ಸಾಮಾಜಿಕ ಜಾಲ ತಾಣ ಪೋಸ್ಟ್ ಗಳನ್ನು ಹಂಚಿದ್ದಾರೆ ಎಂದು ಆರೋಪಿಸಿ ಕಳೆದ ನವೆಂಬರ್ ನಲ್ಲಿ ವಕೀಲರೂ ಹಿಂದುತ್ವವಾದಿಯೂ ಆದ ಅಮಿತ ಸಚ್ದೇವ್ ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲಿನಲ್ಲಿ ದೂರು ನೀಡಿದ್ದರು. ಆದರೆ ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇವರು ನ್ಯಾಯಾಲಯದ ಮೆಟ್ಟಿಲೇರಿದ್ದರು.












