ಶಸ್ತ್ರಕ್ರಿಯೆ ಟೇಬಲ್‍ಗೆ ಧನುಷ್ ಬದಲು ಡ್ಯಾನಿಶ್: ಶಸ್ತ್ರಕ್ರಿಯೆಯಲ್ಲಿ ಪ್ರಮಾದವೆಸಗಿದ ವೈದ್ಯರ ಅಮಾನತು

0
512

ಮಂಜೇರಿ,ಮೇ 22: ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 7 ವರ್ಷದ ಹುಡುಗನ ಬದಲಿಗೆ ಇನ್ನೊಬ್ಬ ಹುಡುಗನಿಗೆ ಶಸ್ತ್ರ ಚಿಕಿತ್ಸೆ ಮಾಡಿದ ಘಟನೆ ನಡೆದಿದೆ. ಸದ್ಯ ತಪ್ಪಿತಸ್ಥ ವೈದ್ಯರನ್ನು ಆರೋಗ್ಯ ಇಲಾಖೆ ಅಮಾನತು ಏಗೊಳಿಸಿದೆ. ಘಟನೆಯಲ್ಲಿ ಕೂಲಂಕಷ ತನಿಖೆ ನಡೆಸುವಂತೆ ಕೇರಳ ಆರೋಗ್ಯ ಸಚಿವೆ ಶೈಲಜಾ ಟೀಚರ್ ಆದೇಶಿಸಿದರು.

ಮೂಗು ಚಿಕಿತ್ಸೆಗೆ ಬಂದ ಮುಹಮ್ಮದ್ ಡ್ಯಾನಿಶ್‌ಗೆ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆದಿದೆ. ಈ ಚಿಕಿತ್ಸೆ ಆರೂವರೆ ವರ್ಷದ ಹುಡುಗ ಧನುಷ್‍ಗೆ ನಿರ್ದೇಶಿಸಲಾಗಿತ್ತು. ಮಕ್ಕಳ ಹೆಸರಿನ ಅವಾಂತರ ವೈದ್ಯರ ಪ್ರಮಾದಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಆಸ್ಪತ್ರೆಯ ಹಿರಿಯ ವೈದ್ಯರಿಂದಲೇ ಅಚಾತುರ್ಯ ಆಗಿಬಿಟ್ಟಿದೆ.ಮೂಗಿಗೆ ಶಸ್ತ್ರ ಚಿಕಿತ್ಸೆಗೆ ಕರೆದುಕೊಂಡು ಹೋದ ಬಾಲಕನ ಹೊಟ್ಟೆಯಲ್ಲಿ ಆಪರೇಶನ್ ಆಗಿದ್ದುದನ್ನು ಕಂಡು ಹೆತ್ತವರು ವೈದ್ಯರಿಗೆ ತಿಳಿಸಿದ್ದಾರೆ. ಆಸ್ಪತ್ರೆಯವರು ಮಗುವಿಗೆ ಹರ್ನಿಯಾ ಸಮಸ್ಯೆ ಇತ್ತು ಅದಕ್ಕಾಗಿ ಆಪರೇಶನ್ ಮಾಡಲಾಯಿತೆಂದು ಸಬೂಬು ಹೇಳಿ ಸಮರ್ಥಿಸಿಕೊಂಡಿದ್ದಾರೆ. ಪುನಃ ಬಾಲಕನನ್ನು ಆಪರೇಷನ್ ಥಿಯೇಟರ್‌ಗೆ ಕರೆದು ಕೊಂಡು ಹೋಗಿ ಮೂಗು ಆಪರೇಷನ್ ಮಾಡಿದ್ದಾರೆ ಎಂದು ಬಾಲಕನ ಹೆತ್ತವರು ತಿಳಿಸಿದರು.