ವಡಗರ,ಮೇ25: ಚುನಾವಣಾ ಫಲಿತಾಂಶದ ಬೆನ್ನಿಗೆ ವಡಗರದಲ್ಲಿ ಘರ್ಷಣೆ ನಡೆದಿದ್ದು ಒಂಚಿಯಂ ಎಂಬಲ್ಲಿ ಎರಡು ಮನೆಗಳ ಮೇಲೆ, ವಡಗರ ಎರಡನೆ ಮೈಲ್ಸ್ನಲ್ಲಿ ಒಂದು ಮನೆಗೆ ನಿನ್ನೆ ಬಾಂಬ್ ಎಸೆಯಲಾಗಿದೆ. ತೊಡನ್ನೂರಿನ ಆರೆಸ್ಸೆಸ್ ಕಾರ್ಯಕರ್ತ ಸುಲೇಶ್ (36) ಎಂಬವರು ಇರಿತಕ್ಕೊಳಗಾಗಿದ್ದಾರೆ. ನಿನ್ನೆ ರಾತ್ರೆ ಹತ್ತೂವರೆ ಗಂಟೆಗೆ ಮನೆಗೆ ಹೊರಟಿದ್ದ ಸುಲೇಶ್ರನ್ನು ತಡೆದು ನಿಲ್ಲಿಸಿ ಗುಂಪೊಂದು ಇರಿದಿದೆ ಎಂದು ಆರೆಸ್ಸೆಸ್ ಆರೋಪಿಸಿದೆ. ಕೈ,ಕಾಲು, ಪಕ್ಕೆಲುಗಳಿಗೆ ಗಂಭೀರ ಗಾಯಗಳಾಗಿವೆ.
ಚುನಾವಣೆಯ ಸೋಲನ್ನು ಬಚ್ಚಿಡಲು ಸಿಪಿಎಂ ಅಕ್ರಮಕ್ಕಿಳಿದಿದೆ ಎಂದು ಬಿಜೆಪಿ ಆರೋಪಿಸಿದೆ. ಘಟನೆಗೆ ಸಂಬಂಧಿಸಿ ಆರು ಸಿಪಿಎಂ ಕಾರ್ಯಕರ್ತರ ವಿರುದ್ಧ ಕೇಸು ದಾಖಲಾಗಿದೆ. ಇದೇವೇಳೆ ಆರ್ಎಂಪಿಐ ಒಂಚಿಯಂ ಏರಿಯ ಕಮಿಟಿ ಸದಸ್ಯ ವಿವಿ ಪ್ರಕಾಶನ್, ಸಿಪಿಎಂ ತಟ್ಟೊಳಿಕ್ಕರ ಶಾಖ ಸದಸ್ಯ ಸನೂಪ್ರ ಮನೆಗೆ ದುಷ್ಕರ್ಮಿಗಳು ಕಚ್ಚಾ ಬಾಂಬು ಎಸೆದಿದ್ದಾರೆ. ಶುಕ್ರವಾರವೇ ಬೆಳಗ್ಗಿನ ಜಾವ 2:45ಕ್ಕೆ ಮುಸ್ಲಿಂ ಲೀಗ್ ಕಾರ್ಯಕರ್ತ ಫೈಝಲ್ರ ಮನೆಗೂ ಕಚ್ಚಾ ಬಾಂಬೆಸೆಯಲಾಗಿದೆ. ಗೋಡೆ ಮತ್ತು ಬಾಗಿಲುಗಳಿಗೆ ಹಾನಿಯಾಗಿದೆ. ಆರ್ಎಂಪಿಯ ತಟ್ಟೋಳಿ ಸಜಿಯವರ ಮನೆಗೂ ಬಾಂಬ್ ಎಸೆಯಲಾಗಿದೆ.












