ಹೊಸದಿಲ್ಲಿ, ಮೇ 27: ಬೀಫ್ ತಿನ್ನುವ ಹಕ್ಕು ಎತ್ತಿಹಿಡಿದು 2017ರಲ್ಲಿ ಫೇಸ್ಬುಕ್ ಪೋಸ್ಟ್ ಹಾಕಿದ್ದಕ್ಕಾಗಿ ಝಾರ್ಕಂಡಿನ ಆದಿವಾಸಿ ಪ್ರೊಫೆಸರನ್ನು ಬಂಧಿಸಲಾಗಿದೆ. ಸ್ಕಾಚ್ಚಿ ಸರಕಾರಿ ಮಹಿಳಾ ಕಾಲೇಜಿನ ಪ್ರೊಫೆಸರ್ ಮತ್ತು ಸಾಮಾಜಿಕ ಕಾರ್ಯಕರ್ತ ಜಿತ್ರಾಯ್ ಹನ್ಸಾರನ್ನು ಪೊಲೀಸರು ಬಂಧಿಸಿದರು. 2017 ಜೂನ್ ತಿಂಗಳಲ್ಲಿ ಪ್ರೊಫೆಸ್ರ ಪೋಸ್ಟ್ ಬಂದಿತ್ತು. ಆಗಲೇ ಎಬಿವಿಪಿ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು. ಚುನಾವಣಾ ಕಾಲವಾದ್ದರಿಂದ ಜೀತ್ರಾಯ್ರನ್ನು ಈ ಮೊದಲು ಬಂಧಿಸಿಲ್ಲ . ಆ ಮೂಲಕ ಆದಿವಾಸಿ ಮತಗಳು ನಷ್ಟವಾಗದಂತೆ ನೋಡುವುದು ಇದಕ್ಕೆ ಕಾರಣವಾಗಿತ್ತು ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ವಕೀಲರೊಬ್ಬರು ವೆಬ್ ನ್ಯೂಸ್ ಪೋರ್ಟಲ್ ಹಫಿಂಗ್ಟನ್ ಪೋಸ್ಗೆ ತಿಳಿಸಿದ್ದಾರೆ.
ಬುಡಕಟ್ಟು ಜನರಿಗೆ ಬೀಫ್ನೊಂದಿಗೆ ಇರುವ ಇಷ್ಟ ಮತ್ತು ದನವನ್ನು ದೇವಂದಿರಿಗೆ ಸಮರ್ಪಿಸುವುದನ್ನು ವಿವರಿಸಿ ಜೀತ್ರಾಯ್ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು. ಬೀಪ್ ತಿನ್ನುವುದು ಬುಡಕಟ್ಟು ಜನರ ಪ್ರಜಾಪ್ರಭುತ್ವಪರ ಮತ್ತು ಸಾಂಸ್ಕøತಿಕ ಹಕ್ಕು. ಆದ್ದರಿಂದ ಹಿಂದೂ ಆಚಾರಗಳನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ಅವರು ಬರೆದಿದ್ದರು. ಭಾರತದ ರಾಷ್ಟ್ರೀಯ ಪಕ್ಷಿ ನವಿಲನ್ನು ಕೂಡ ಆದಿವಾಸಿಗಳು ತಿನ್ನುತ್ತಾರೆ ಎಂದೂ ಅವರು ಹೇಳಿದ್ದರು. ಲೋಕಸಭಾ ಚುನಾವಣೆ ನಡೆದ ಕೂಡಲೇ ಜೀತ್ರಾಯ್ ಬಂಧನವಾಗಿದೆ. ಈ ಸಲ ಬಿಜೆಪಿ ಝಾರ್ಕಂಡಿನ 14 ಲೋಕಸಭಾ ಸ್ಥಾನಗಳಲ್ಲಿ 12ನ್ನು ಗೆದ್ದುಕೊಂಡಿದೆ.












