ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ SDPI ಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

0
576

ಸನ್ಮಾರ್ಗ ವಾರ್ತೆ

▪️ ವಕ್ಫ್‌ಗಾಗಿ ಹುತಾತ್ಮರಾಗಲು ನಾವು ತಯಾರಾಗಿದ್ದೇವೆ: ಅನ್ವರ್ ಸಾದತ್ ಬಜತ್ತೂರು

▪️ ಬಿಲ್‌ನ್ನು ಹಿಂಪಡೆಯುವ ತನಕ SDPI ಹೋರಾಟದ ರಂಗದಲ್ಲೇ ಇರಲಿದೆ: ರಿಯಾಝ್ ಕಡಂಬು

ಮಂಗಳೂರು: ಲೋಕಸಭೆಯಲ್ಲಿ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿದ್ದನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ದೇಶಾದ್ಯಂತ ಹಮ್ಮಿಕೊಂಡ ಪ್ರತಿಭಟನೆಯ ಅಂಗವಾಗಿ SDPI ಮಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿ ತುರ್ತು ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ ನಾಗಪುರದ ಸಂಘಿಗಳಿಗೆ ತಲೆಯೊಡ್ಡುವ ಬಿಜೆಪಿ ಸರ್ಕಾರ ಮುಸ್ಲಿಮರ ವಿರುದ್ಧ ದ್ವೇಷ ಸಾಧನೆಗೈಯುತ್ತ ಈ ಮಾರಕ ಮಸೂದೆಯನ್ನು ತರುತ್ತಿದೆ.

ನೀವು ಲೋಕಸಭೆಯಲ್ಲಿ ಸಂಖ್ಯಾ ಬಲದ ಆಧಾರದ ಮೇಲೆ ವಕ್ಫ್ ಮಸೂದೆ ತಂದರು ಈ ದೇಶದ ಮುಸ್ಲಿಮರು ಒಪ್ಪಲು ಖಂಡಿತ ಸಾಧ್ಯವಿಲ್ಲ.

ಈ ಮಾರಕ ಮಸೂದೆಯನ್ನು ಇಲ್ಲಿನ ಉಲಾಮಗಳು ವಿರೋದಿಸಿದ್ದಾರೆ ಅವರು ಹೋರಾಟಕ್ಕೆ ಕರೆ ಕೊಟ್ಟರೆ ಹೋರಾಟದ ಮೂಲಕ ಬ್ರಿಟಿಷರನ್ನು ದೇಶದಿಂದ ಹೇಗೆ ಹೊರದಬ್ಬಿದ್ದೇವೋ ಅದೇ ರೀತಿ ಸಂಘಪರಿವಾರವನ್ನು ಹೋರಾಟದ ಮೂಲಕ ಈ ದೇಶದಿಂದ ಓಡಿಸಲಿಕ್ಕಿದ್ದೇವೆ ಎಂದು ಎಚ್ಚರಿಸಿದರು.

ಸಂಘಪರಿವಾರಕ್ಕೆ ಕೇವಲ ಮುಸ್ಲಿಮರು ಮಾತ್ರ ಶತ್ರುಗಳಲ್ಲ ಬ್ರಾಹ್ಮಣರ‌ನ್ನು ಹೊರತುಪಡಿಸಿ ಇತರ ಎಲ್ಲರೂ ಇವರ ಶತ್ರುಗಳೆ ಎಂದು ಹೇಳಿ ಸಂಘಪರಿವಾರದ ಕರಾಳ ಇತಿಹಾಸವನ್ನು ಹೇಳಿದರು.

ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ, ಸೂರ್ಯ ಮುಳುಗುವ ,ಚಂದ್ರ ಉದಯಿಸುವ ಹಾಗೂ ಇಲ್ಲಿರುವ ಜನ ಸಾಗರದ ಸಾಕ್ಷಿಯಾಗಿ ಹೇಳುತ್ತಿದ್ದೇವೆ ವಕ್ಫ್ ಮಸೂದೆಯನ್ನು ಎಸ್.ಡಿ.ಪಿ.ಐ ವಿರೋದಿಸುತ್ತಿದೆ ಹಾಗೂ ಈ ಕಾಗದವನ್ನು ಹರಿಯುವ ಮೂಲಕ ಕೇಂದ್ರ ಸರ್ಕಾರದ ಮುಖಕ್ಕೆ ಬಿಸಾಡುತಿದ್ದೇವೆ ಎಂದು ಘೋಷಿಸಿ ಬಿಲ್ ನ್ನು ವೇದಿಕೆಯಲ್ಲಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ಮುಸ್ಲಿಮರನ್ನು ಹಾಗೂ ವಕ್ಫ್ ಮಸೂದೆ ವಿರೋಧಿ ಹೋರಾಟಗಾರರನ್ನು ಅತ್ಯಂತ ತುಚ್ಚವಾಗಿ ನಿಂದಿಸಿದ ಪಬ್ಲಿಕ್ ಟಿವಿಯ ರಂಗನಾಥ್ ಹಾಗೂ ಮಾರಲ್ಪಟ್ಟ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ಅದೇ ರೀತಿ ಪ್ರತಿಭಟನಾಕಾರರು ವಕ್ಫ್ ಬಿಲ್ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ SDPI ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲ ಜೋಕಟ್ಟೆ,ಮಿಸ್ರಿಯ ಕಣ್ಣೂರು, ನಗರ ಜಿಲ್ಲಾಧ್ಯಕ್ಷರಾದ ಜಲೀಲ್ ಕೆ,ಉಪಾಧ್ಯಕ್ಷರಾದ ಅಶ್ರಫ್ ಅಡ್ಡೂರು, ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, ನಗರ ಉಪಾಧ್ಯಕ್ಷೆ ಆಯಿಷಾ ಬಜ್ಪೆ, ನಗರ ವಿಮ್ ಅಧ್ಯಕ್ಷೆ ನಿಶಾ ವಾಮಂಜೂರು ಉಪಸ್ಥಿತರಿದ್ದರು.

ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಸ್ವಾಗತಿಸಿದರು ಹಾಗೂ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿರವರು ಕಾರ್ಯಕ್ರಮ ನಿರೂಪಿಸಿದರು.