ಸನ್ಮಾರ್ಗ ವಾರ್ತೆ
ಮುಂಬೈನಲ್ಲಿ ಅಜ್ಮಲ್ ಕಸಬ್ನ ಸಹೋದರ ಎಂದು ಹೇಳಿ ಬಾಂಬ್ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ 1ರಂದು ಬೆಳಗಿನ ಜಾವ 1.07ಕ್ಕೆ ಮುಂಬೈ ಪೊಲೀಸರ ಟೋಲ್-ಫ್ರೀ ಸಂಖ್ಯೆ 100ಗೆ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು 26/11 ಭಯೋತ್ಪಾದಕ ದಾಳಿ ಆರೋಪಿಯಾದ ಅಜ್ಮಲ್ ಕಸಬ್ನ ಸಹೋದರನಾಗಿದ್ದು, ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಭಯಹುಟ್ಟಿಸುವ ಸಂದೇಶವನ್ನು ನೀಡಿದ್ದಾನೆ.
ತಕ್ಷಣ ಎಚ್ಚೆತ್ತ ಪೊಲೀಸರು ಮೊಬೈಲ್ ಫೋನ್ ಸಿಗ್ನಲ್ಗಳ ಆಧಾರದ ಮೇಲೆ ತನಿಖೆ ನಡೆಸಿದಾಗ, ಕರೆ ಮುಲುಂಡ್ ರೈಲ್ವೆ ನಿಲ್ದಾಣ ಪ್ರದೇಶದಿಂದ ಬಂದಿರುವುದು ದೃಢಪಟ್ಟಿತು. ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ, ಉತ್ತರ ಪ್ರದೇಶದ ನಿವಾಸಿಯಾದ ಪಿಯೂಷ್ ಶಿವನಾಥ್ ಎಂಬುವವರನ್ನು ಬಂಧಿಸಿದರು.
ಈ ಬೆದರಿಕೆಯಿಂದ ಮುಂಬೈ ಪೊಲೀಸರು ಕ್ಷಣಾರ್ಧದಲ್ಲೇ ಕಾರ್ಯಪ್ರವೃತ್ತರಾಗಿದ್ದು, ನಿಯಂತ್ರಣ ಕೊಠಡಿಯ ಸುರಕ್ಷತೆ ಹೆಚ್ಚಿಸಲಾಯಿತು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.












