ಸನ್ಮಾರ್ಗ ವಾರ್ತೆ
ಜಗತ್ತಿನ ವಿವಿಧ ರಾಷ್ಟ್ರಗಳ ಮೇಲೆ ಪ್ರತಿ ಸುಂಕ ವಿಧಿಸುವ ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರ ನೀತಿ ಅವರಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಅಮೆರಿಕಾದ ಶೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತವಾಗಿರುವುದು, ಟ್ರಂಪ್ ಅವರ ತಲೆಕೆಡಿಸಿದೆ . ಕೊರೋನ ಕಾಲದ ಬಳಿಕ ಇದೇ ಮೊದಲ ಬಾರಿ ಅಮೆರಿಕಾದ ಶೇರುಪೇಟೆ ಭಾರಿ ಕುಸಿತವನ್ನು ಕಂಡಿದೆ.
ಭಾರತ ಸಹಿತ 180 ರಾಷ್ಟ್ರಗಳಿಗೆ ಪ್ರತಿ ತೆರಿಗೆಯನ್ನು ವಿಧಿಸುವ ಘೋಷಣೆಯನ್ನು ಟ್ರಂಪ್ ಮಾಡಿರುವುದರ ಬೆನ್ನಿಗೆ ಈ ಷೇರು ಮಾರುಕಟ್ಟೆ ಕುಸಿತ ಕಂಡಿದೆ.
ಭಾರತದ ಮೇಲೆ 26 ಶೇಕಡ, ಚೀನಾದ ಮೇಲೆ 54 ಶೇಕಡಾ, ಯುರೋಪಿಯನ್ ಯೂನಿಯನ್ ನ ಮೇಲೆ 20 ಶೇಕಡ, ಜಪಾನ್ ಮೇಲೆ 24 ಶೇಕಡಾ, ದಕ್ಷಿಣ ಕೊರಿಯಾದ ಮೇಲೆ 25 ಶೇಕಡಾ ಪ್ರತಿ ಸುಂಕವನ್ನು ಡೊನಾಲ್ಡ್ ಟ್ರಂಪ್ ವಿಧಿಸಿದ್ದಾರೆ. ಇದೀಗ ಈ ರಾಷ್ಟ್ರಗಳು ಕೂಡ ಅಮೆರಿಕಾದ ವಸ್ತುಗಳ ಮೇಲೆ ಸುಂಕ ವಿದಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದು ಸುಂಕ ಯುದ್ಧವು ಮುಂದೊಂದು ದಿನ ತೃತೀಯ ವಿಶ್ವ ಯುದ್ಧವಾಗಿ ಪರಿವರ್ತಿತವಾಗಬಹುದೇ ಅನ್ನುವ ಚರ್ಚೆಗೂ ಕಾರಣವಾಗಿದೆ.












