ಸನ್ಮಾರ್ಗ ವಾರ್ತೆ
ವಕ್ಫ್ ತಿದ್ದುಪಡಿ ಮಸೂದೆಯು ರಾಷ್ಟ್ರಪತಿಯವರ ಸಹಿಯೊಂದಿಗೆ ಕಾಯ್ದೆಯಾಗಿ ಬದಲಾಗಿದ್ದು ಇದರ ವಿರುದ್ಧ ಓವೈಸಿ, ಎಎಪಿ ಶಾಸಕ ಅಮಾನತುಲ್ಲಾ ಖಾನ್, ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್, ಜಮಿಯತೆ ಉಲಮಾಯೇ ಹಿಂದ್, ಎಪಿಸಿಆರ್ ಮತ್ತು ಅಖಿಲ ಕೇರಳ ಜಮೀಯತುಲ್ ಉಲಮ ಸಂಘಟನೆಗಳು ಸುಪ್ರೀಂ ಕೋರ್ಟ್ನ ಮೆಟ್ಟಲು ಹತ್ತಿವೆ. ಜಮಿಯತೆ ಉಲಮಯೆ ಹಿಂದ್ನ ಪರವಾಗಿ ಖ್ಯಾತ ವಕೀಲ ಕಪಿಲ್ ಸಿಬಲ್ ವಾದಿಸಲಿದ್ದಾರೆ.
ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನ ಅವರ ನೇತೃತ್ವದ ತ್ರಿ ಸದಸ್ಯ ಪೀಠದ ಮುಂದೆ ಕಪಿಲ್ ಸಿಬಲ್ ಅವರು ವಾದ ನಡೆಸಿದ್ದಾರೆ ಮತ್ತು ಶೀಘ್ರವೇ ಇದನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಕೋರಿದ್ದಾರೆ. ಇದೇ ವೇಳೆ ಇತರ ಸಂಘಟನೆಗಳು ಮತ್ತು ವ್ಯಕ್ತಿಗಳು ಈ ಕುರಿತಂತೆ ಅರ್ಜಿಯನ್ನು ಸಲ್ಲಿಸಿದ್ದು ಅವುಗಳ ಬಗ್ಗೆಯೂ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯ ನ್ಯಾಯಾಧೀಶರು ತಿಳಿಸಿದ್ದಾರೆ.
ಇದೇ ವೇಳೆ ಸಮಸ್ತ ಕೇರಳ ಜವಿಯತುಲ್ ಉಲಮ ಕೂಡ ಸುಪ್ರೀಂ ಕೋರ್ಟ್ನಲ್ಲಿ ದೂರು ದಾಖಲಿಸಿದ್ದು ವಕ್ಪ್ ತಿದ್ದುಪಡಿ ಮಸೂದೆಯನ್ನು ಕರಾಳ ಕಾನೂನು ಎಂದು ವ್ಯಾಖ್ಯಾನಿಸಿದೆ. ಸಂವಿಧಾನದ 26ನೇ ಸೆಕ್ಷನ್ ಅನ್ನು ಈ ಕಾಯ್ದೆ ಉಲ್ಲಂಘಿಸುತ್ತದೆ ಎಂದು ಹೇಳಿದೆ.












