ಸನ್ಮಾರ್ಗ ವಾರ್ತೆ
ವಕ್ಫ್ ಕಾಯ್ದೆಯನ್ನು ಪ್ರತಿಭಟಿಸಿ ಮಣಿಪುರದ ಮೈತಿ ಫಂಗಲ್ ಅಥವಾ ಮುಸ್ಲಿಂ ಸಮುದಾಯ ಭಾರಿ ಪ್ರತಿಭಟನೆಯನ್ನು ನಡೆಸಿದೆ. ಇದೇ ವೇಳೆ ವಕ್ಫ್ ಕಾಯ್ದೆಯನ್ನು ಸ್ವಾಗತಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷ ಮೊಹಮ್ಮದ್ ಅಜ್ಗರ್ ಅಲಿ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಆ ಬಳಿಕ ಅವರು ತಮ್ಮ ಪೋಸ್ಟಿಗೆ ವಿಷಾದ ಸೂಚಿಸಿದ್ದಾರೆ.
ಈ ಕಾಯ್ದೆ ಅಸ್ವೀಕಾರಾರ್ಹವಾಗಿದೆ ಇದು ಸಂವಿಧಾನ ವಿರೋಧಿಯಾಗಿದೆ ಮತ್ತು ಮುಸ್ಲಿಂ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಫ್ತಿ ಝಿಯವುರ್ರಹ್ಮಾನ್ ಹೇಳಿದ್ದಾರೆ. ವಿವಿಧ ಸಾಮಾಜಿಕ ಮತ್ತು ನಾಗರಿಕ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು. ಮಣಿಪುರ ಸಂಘರ್ಷಮಯವಾಗಿದ್ದು ಕೂಡ ಇಂಥದೊಂದು ಪ್ರತಿಭಟನೆ ಯನ್ನು ಮುಸ್ಲಿಮರು ಹಮ್ಮಿಕೊಂಡಿರುವುದು ಮತ್ತು ಅದಕ್ಕೆ ಭಾರಿ ಬೆಂಬಲ ವ್ಯಕ್ತವಾಗಿರುವುದಕ್ಕೆ ಶ್ಲಾಘನೆ ವ್ಯಕ್ತವಾಗಿದೆ.












