ಹತ್ತನೆ ಮಹಡಿಯಿಂದ ಬಿದ್ದು ಬದುಕುಳಿದ ಎರಡು ವರ್ಷದ ಹೆಣ್ಮಗು

0
677

ರಾಸಲ್‍ಖೈಮ, ಮೇ 29: ಕಳೆದ ಫೆಬ್ರುವರಿ ತಿಂಗಳಿನಲ್ಲಿ ಬಹು ಮಹಡಿ ಕಟ್ಟಡವೊಂದರ ಹತ್ತನೆ ಮಹಡಿಯಿಂದ ಕೆಳಗೆ ಪಾರ್ಕ್ ಮಾಡಿದ್ದ ಕಾರಿಗೆ ಬಿದ್ದು ಗಾಯಗೊಂಡ ಮಗು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ. ಲೀನ್ ಫರ್‍ಗಾಲಿ ಎಂಬ ಎರಡು ವರ್ಷದ ಮಗು ಹತ್ತನೆ ಮಹಡಿಯಿಂದ ಕಾರಿನ ಹಿಂಬದಿಯ ಗಾಜಿಗೆ ಬಿದ್ದು ಕಾರಿನ ಗಾಜು ಒಡೆದು ಮಗು ಕಾರಿನೊಳಗೆ ಹೋಗಿ ಬಿದ್ದಿತ್ತು. ಮಗುವಿನ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಮಗುವನ್ನು ಸಖರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಗು ಕಾರಿನ ಗಾಜಿಗೆ ಬಿದ್ದು ಗಾಜು ಒಡೆದದ್ದರಿಂದ ಮಗು ಬಚಾವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಗುಣಮುಖವಾದ ಮಗು ಓಡಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ. ಕಟ್ಟಡದ ಕಿಟಕಿಯಿಂದ ಮಗು ಕೆಳಗೆ ಬಿದ್ದಿತ್ತು. ಕಿಟಕಿಯನ್ನು ಸುರಕ್ಷಾ ಮಾನದಂಡರಹಿತವಾಗಿ ನಿರ್ಮಿಸಲಾಗಿದೆ ಎಂದು ಸ್ಥಳ ಪರಿಶೀಲಿಸಿದ ಸಿವಿಲ್ ಡಿಫೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

https://www.instagram.com/tv/Bx-MZ8dg0Po/?utm_source=ig_web_copy_link