ಸೋತು ಸುಣ್ಣವಾದ ಸಮಾಜವಾದಿ ಪಾರ್ಟಿಯಲ್ಲೂ ನಾಯಕತ್ವ ಬದಲಾವಣೆಯ ತೂಗುಕತ್ತಿ

0
415

ಲಕ್ನೊ,ಮೇ29: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಪರಾಭವಗೊಂಡ ಸಮಾಜವಾದಿ ಪಾರ್ಟಿಯಲ್ಲಿಯೂ ನಾಯಕತ್ವ ಬದಲಾವಣೆ ಚರ್ಚೆ ಸಕ್ರಿಯವಾಗಿದೆ. ಪಾರ್ಟಿಯ ಜಿಲ್ಲಾಧ್ಯಕ್ಷರು ಮತ್ತು ಹಿರಿಯ ನಾಯಕರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಲು ಅಖಿಲೇಶ್ ಯಾದವ್ ಮುಂದಾಗಿದ್ದಾರೆ. ಲೋಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಪಾರ್ಟಿ ಹಲವು ಸಭೆ ನಡೆಸಿದೆ. ಹೊಸ ನಾಯಕರಿಗೆ ಹೊಣೆ ವಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ ಎಂದು ನ್ಯೂಸ್ 18 ಚ್ಯಾನೆಲ್‍ಗೆ ಹಿರಿಯ ನಾಯಕರೊಬ್ಬರು ತಿಳಿಸಿದರು. ಚುನಾವಣಾ ಫಲಿತಾಂಶ ಬಂದ ಬೆನ್ನಿಗೆ ನಾಯಕರು ಮಾಧ್ಯಮ ಚರ್ಚೆಗೆ ತೆರಳಬಾರದೆಂದು ಪಾರ್ಟಿ ಕಟ್ಟು ನಿಟ್ಟಿನ ನಿರ್ದೇಶನ ನೀಡಿತ್ತು. ಉತ್ತರಪ್ರದೇಶದಲ್ಲಿ 37 ಸೀಟುಗಳಲ್ಲಿ ಸ್ಪರ್ಧಿಸಿದ್ದ ಸಮಾಜವಾದಿ ಪಾರ್ಟಿ ಐದು ಸೀಟು ಗೆದ್ದು ಕಳಪೆ ಪ್ರದರ್ಶನ ಪ್ರದರ್ಶಿಸಿದೆ. ಧರ್ಮೇಂದ್ರ ಯಾದವ್, ಅಕ್ಷಯ್ ಯಾದವ್, ಅಖಿಲೇಶ್ ಪತ್ನಿ ಡಿಂಪಲ್ ಯಾದವ್ ಸೋತದ್ದು ಸಮಾಜವಾದಿ ಪಾರ್ಟಿಗೆ ಬಹುದೊಡ್ಡ ಹಿನ್ನಡೆಯಾಗಿದೆ.