ಹೊಸದಿಲ್ಲಿ,ಮೇ 29: ಚುನಾವಣಾ ಸೋಲಿನ ಜವಾಬ್ದಾರಿಯನ್ನು ಹೊತ್ತುಕೊಂಡು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿಲುವಿನಿಂದ ರಾಹುಲ್ ಗಾಂಧಿ ಹಿಂದೆ ಸರಿದಿಲ್ಲ. ಇದು ಕಾಂಗ್ರೆಸ್ಸಿನೊಳಗೆ ದೊಡ್ಡ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ. ಹಿರಿಯ ನಾಯಕರೊಂದಿಗೆ ಚರ್ಚೆಗೆ ರಾಹುಲ್ ನಿರಾಕರಿಸಿದ್ದಾರೆ. ಆದ್ದರಿಂದ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ದಿಲ್ಲಿ ಪ್ರವಾಸವನ್ನು ರದ್ದು ಪಡಿಸಿದರು. ಅತಿ ಶೀಘ್ರ ಹೊಸ ಅಧ್ಯಕ್ಷರನ್ನು ಗುರುತಿಸುವಂತೆ ನಾಯಕರಿಗೆ ರಾಹುಲ್ ಹೇಳಿದ್ದು, ಇದೇ ವೇಳೆ ರಾಹುಲ್ರನ್ನು ಒಪ್ಪಿಸುವ ಕೆಲಸವನ್ನು ಮಾಡಲು ನಾಯಕರನ್ನು ಮುಂದುವರಿಸುತ್ತಿದ್ದಾರೆ. ರಾಹುಲ್ ರಾಜೀನಾಮೆಯಲ್ಲಿ ಪಟ್ಟು ಹಿಡಿದರೆ ರಾಜೇಶ್ ಪೈಲಟ್ ರಾಜಸ್ತಾನ ಉಪಮುಖ್ಯಮಂತ್ರಿ ಸ್ಥಾನವನ್ನು ತೊರೆಯಲು ನಿರ್ಧರಿಸಿದ್ದಾರೆ. ಇದೇ ವೇಳೆ ರಾಹುಲ್ರಿಗೆ ಮಿತ್ರಪಕ್ಷಗಳು ಕೂಡ ನಿರ್ಧಾರ ಬದಲಿಸುವಂತೆ ಒತ್ತಾಯಿಸುತ್ತಿವೆ.












