ಖ್ಯಾತ ವಿಚಾರವಾದಿ, ಧರ್ಮ ನಿರಪೇಕ್ಷ ಪ್ರತಿಪಾದಕ ಸನಲ್ ವಂಚನೆ ಪ್ರಕರಣದಲ್ಲಿ ಬಂಧನ; ಏನದು ವಂಚನೆ

0
1072

ಸನ್ಮಾರ್ಗ ವಾರ್ತೆ

ನವದೆಹಲಿ: ಪ್ರಮುಖ ವಿಚಾರವಾದಿ ಮತ್ತು ಧರ್ಮನಿರಪೇಕ್ಷತೆಯ ಪ್ರತಿಪಾದಕ ಸನಲ್ ಇಡಮಾರು ಅವರನ್ನು ಪೋಲೆಂಡ್‌ನ ವಾರ್ಸಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. 2020 ರಲ್ಲಿ ದಾಖಲಾದ ವೀಸಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಈ ಬಂಧನ ನಡೆದಿದೆ. ಭಾರತ ಸರ್ಕಾರದ ವಿನಂತಿಯ ಮೇರೆಗೆ ಇಂಟರ್‌ಪೋಲ್‌ ರೆಡ್ ಕಾರ್ನರ್ ನೋಟಿಸ್‌ ಜಾರಿ ಮಾಡಲಾಗಿತ್ತು.

ಸನಲ್ ವಿರುದ್ಧ ಧರ್ಮನಿಂದನೆ ಆರೋಪದ ಮೇಲೆ ಕ್ಯಾಥೋಲಿಕ್ ಚರ್ಚ್‌ ಮೊದಲು ಪ್ರಕರಣ ದಾಖಲಿಸಿತ್ತು. ಅವರು 2012ರಿಂದ ಫಿನ್ಲೆಂಡ್‌ನಲ್ಲಿ ವಾಸವಿದ್ದು, ಯುರೋಪ್‌ನಲ್ಲಿ ವಿವಿಧ ಮಾನವ ಹಕ್ಕುಗಳ ವೇದಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. “ನಾನು ಮಾನವ ಹಕ್ಕುಗಳ ಸಭೆಯಲ್ಲಿ ಭಾಗವಹಿಸಲು ಪೋಲೆಂಡ್‌ಗೆ ಬಂದಿದ್ದೆ,” ಎಂದು ಬಂಧನೆಯ ಸಂದರ್ಭದಲ್ಲಿ ಸನಲ್ ಹೇಳಿದ್ದಾರೆ.

ಈ ಪ್ರಕರಣವು ಭಾರತದಲ್ಲಿ ಧರ್ಮಸ್ವಾತಂತ್ರ್ಯ, ಧರ್ಮನಿರಪೇಕ್ಷತೆ ಹಾಗೂ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಂತೆ ನವೀನ ಚರ್ಚೆಗೆ ದಾರಿ ಮಾಡಿಕೊಡಲಿದೆ ಎಂಬ ನಿರೀಕ್ಷೆಯಿದೆ.