ಇಂದು ಜಿಸಿಸಿ ಶೃಂಗ ಸಭೆ: ಕುತೂಹಲ ಕೆರಳಿಸಿರುವ ಕತರ್ ಭಾಗವಹಿಸುವಿಕೆ

0
642

ಜಿದ್ದ,ಮೇ 30: ಅರಬ್ ಇಸ್ಲಾಮಿಕ್ ದೇಶಗಳ ಒಗ್ಗಟ್ಟು, ಬಿಕ್ಕಟ್ಟು ಚರ್ಚಿಸುವ ಗಲ್ಫ್, ಅರಬ್, ಇಸ್ಲಾಮಿಕ್ ಶೃಂಗ ಸಭೆಯು ಇಂದು ಮಕ್ಕದಲ್ಲಿ ಆರಂಭವಾಗುತ್ತಿದೆ. ಇದು ಜಿಸಿಸಿ ತುರ್ತು ಶೃಂಗ ಮತ್ತು ಅರಬ್ ಶೃಂಗ ಗುರುವಾರ ನಡೆಯಲಿದೆ. ಶುಕ್ರವಾರ ಇಸ್ಲಾಮಿಕ್ ದೇಶಗಳ ಶೃಂಗ ಸಭೆ ನಡೆಯುತ್ತದೆ. ಬೇರೆ ಬೇರೆ ದೇಶಗಳ ರಾಷ್ಟ್ರ ನಾಯಕರು ಸಮ್ಮೇಳನದಲ್ಲಿ ಭಾಗವಹಿಸಲು ಮಕ್ಕಕ್ಕೆ ಬಂದಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಇರಾನ್ ಹುಟ್ಟು ಹಾಕಿರುವ ಬೆದರಿಕೆಯನ್ನು ಜಿಸಿಸಿ ಸಭೆ ತುರ್ತಾಗಿ ಚರ್ಚಿಸಲಿದೆ. ಕತರ್ ಸಹಿತ ಆರು ದೇಶಗಳು ಇದರಲ್ಲಿ ಭಾಗವಹಿಸುತ್ತಿದೆ. 21 ಸದಸ್ಯ ರಾಷ್ಟ್ರಗಳು ಭಾಗವಹಿಸುವ ಅರಬ್ ಲೀಗ್ ಶೃಂಗಸಭೆಯು ಗುರುವಾರ ನಡೆಯುವುದು. ಶುಕ್ರವಾರ ನಡೆಯುವ ಇಸ್ಲಾಮಿಕ್ ದೇಶಗಳ ಶೃಂಗದಲ್ಲಿ 56 ದೇಶಗಳು ಭಾಗವಹಿಸಲಿವೆ. ಇದಕ್ಕೆ ಮೊದಲು ವಿದೇಶ ಸಚಿವರ ಸಭೆಯು ಬುಧವಾರ ರಾತ್ರೆ ಜಿದ್ದದಲ್ಲಿ ನಡೆಯಿತು.ಕತರ್ ದಿಗ್ಬಂಧನದ ವಿಷಯವನ್ನು ಶೃಂಗ ಸಭೆಯು ಹೇಗೆ ಚರ್ಚಿಸುತ್ತದೆ ಎನ್ನುವ ಕುತೂಹಲ ಸಾರ್ವತ್ರಿಕ ಕೆರಳಿದೆ.