ದಮ್ಮಾಂ,ಮೇ 30: ಪ್ರತಿಭಟನೆ ನಡೆಸಿದ್ದಕ್ಕಾಗಿ ಕಂಪೆನಿಯು ಎಕ್ಸಿಟ್ನಲ್ಲಿ ಊರಿಗೆ ಗಡಿಪಾರು ಮಾಡಿದ ಕೇರಳ ಮೂಲದ ವ್ಯಕ್ತಿಯೊಬ್ಬ ಫೇಸ್ಬುಕ್ನಲ್ಲಿ ಅವಾಸ್ತವ ವಿಷಯಗಳನ್ನು ಪ್ರಚಾರ ಮಾಡಿದ್ದು ಇದನ್ನು ಶೇರ್ ಮಾಡಿರುವ ಅದೇ ಕಂಪೆನಿಯಲ್ಲಿ ದುಡಿಯುತ್ತಾ ಈಗಲೂ ಸೌದಿಯಲ್ಲಿರುವ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನು ಇವರಲ್ಲದೇ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ಶೇರ್ ಮಾಡಿರುವ ಎಲ್ಲರನ್ನು ಬಂಧಿಸಲಾಗುವುದು ಎಂದು ಹೇಳಲಾಗುತ್ತಿದೆ. ಎರಡು ವಾರ ಮೊದಲು ಘಟನೆ ನಡೆದಿದ್ದು, ಕಂಪೆನಿ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡ ಪ್ರಕರಣದಲ್ಲಿ ಪಾಲಕ್ಕಾಡಿನ ವ್ಯಕ್ತಿಯನ್ನು ಕಂಪೆನಿ ಎಕ್ಸಿಟ್ ಹೊಡೆದು ಊರಿಗೆ ಕಳುಹಿಸಿತ್ತು. ಈತ ಊರಿಗೆ ಬಂದು ಕಂಪೆನಿ ಮ್ಯಾನೇಜರ್ ವಿರುದ್ಧ ವೈಯಕ್ತಿಕ ಮತ್ತು ಒಟ್ಟು ಕಂಪೆನಿಯನ್ನು ದೂಷಿಸಿ ಫೇಸ್ಬುಕ್ನಲ್ಲಿ ಬರೆದಿದ್ದಾನೆ. ಇದನ್ನು ಭಾರತದ ಕೆಲವು ಕಾರ್ಮಿಕರು ಶೇರ್ ಮಾಡಿದ್ದಾರೆ. ಇದು ಕಂಪೆನಿಗೆ ಗೊತ್ತಾಗಿ ಕೇರಳ ಮೂಲದ ಇಬ್ಬರು ಕಾರ್ಮಿಕರನ್ನು ಬಂಧಿಸಲಾಗಿದೆ. ಗಂಟೆಗಳೊಳಗೆ ಸುಮಾರು 65 ಮಂದಿ ಇದನ್ನು ಶೇರ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.












