ಗೋಡ್ಸೆಯನ್ನು ಹೊಗಳಿದ ಬಿಜೆಪಿ ಶಾಸಕಿ ಉಷಾ ಠಾಕೂರ್ !

0
539

ಇಂಧೋರ್,ಮೇ 30: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಬೆನ್ನಿಗೆ ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆಯನ್ನು ಮಧ್ಯಪ್ರದೇಶದ ಇಂಧೋರಿನ ಬಿಜೆಪಿ ಶಾಸಕಿ ಉಷಾ ಠಾಕೂರ್ ಗೊಡ್ಸೆಯನ್ನು ರಾಷ್ಟ್ರವಾದಿಯೆಂದು ಹೇಳಿ ಹೊಗಳಿದರು. ಗೋಡ್ಸೆ ದೇಶಕ್ಕಾಗಿ ಬದುಕಿದವರು ಎಂದ ಅವರು ಮಧ್ಯಪ್ರದೇಶ ಬಿಜೆಪಿ ಉಪಾಧ್ಯಕ್ಷೆಯಾಗಿದ್ದಾರೆ. 2014ರಲ್ಲಿ ಗುಜರಾತಿ ಡ್ಯಾನ್ಸ್ ಫೆಸ್ಟಿವಲ್‍ನಿಂದ ಮುಸ್ಲಿಮರಿಗೆ ನಿಷೇಧ ಹೇರಬೇಕೆಂದು ಹೇಳಿ ಮುಸ್ಲಿಮರ ವಿರುದ್ಧ ರಂಗಪ್ರವೇಶಿಸಿದ್ದರು. ಇದು ಉಷಾರ ಹೇಳಿಕೆಯಲ್ಲ ಬದಲಾಗಿ ಇದನ್ನಯ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದ್ದು, ಅನಾವಶ್ಯಕ ವಿವಾದವನ್ನು ಸೃಷ್ಟಿಸಲಾಗುತ್ತಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.