ಜೈಪುರ: ಮಸೀದಿಯ ಹೊರಗೆ ಪ್ರತಿಭಟನೆ ಮಾಡಿದ ಬಿಜೆಪಿ ಶಾಸಕರ ವಿರುದ್ಧ ಪ್ರಕರಣ

0
445

ಸನ್ಮಾರ್ಗ ವಾರ್ತೆ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಜೈಪುರದ ಜೋಹಾರಿ ಬಜಾರ್‌ನ ಜುಮಾ ಮಸೀದಿಯ ಹೊರಗೆ ನಡೆದ ಪ್ರತಿಭಟನೆ ಮಾಡಿದ ಬಿಜೆಪಿ ಶಾಸಕ ಬಾಲ್ ಮುಕುಂದ್ ಆಚಾರ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಜೈಪುರದ ಮುಹಾನಾ ಪೊಲೀಸ್ ಠಾಣೆ ಎಸ್‌ಎಚ್‌ಒ ಉದಯ್ ಸಿಂಗ್ ಅವರ ಪ್ರಕಾರ, ಪರಿಸ್ಥಿತಿಯನ್ನು ನಿಯಂತ್ರಿಸಲು ಮಸೀದಿಯ ಬಳಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಈ ಮಧ್ಯೆ, ಕಾಂಗ್ರೆಸ್ ನಾಯಕಿ ಮತ್ತು ವಿರೋಧ ಪಕ್ಷದ ನಾಯಕಿ ಟೀಕರಾಮ್ ಜೂಲಿ, ಬಿಜೆಪಿ ಶಾಸಕರ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅವರು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರಿಗೆ ಬಿಜೆಪಿ ಶಾಸಕರನ್ನು ನಿಯಂತ್ರಿಸಲು ಆಗ್ರಹಿಸಿದರು.

“ಇಡೀ ದೇಶವೇ ಈಗ ಶೋಕದಲ್ಲಿದೆ. ಪ್ರತಿಯೊಬ್ಬ ಭಾರತೀಯನು ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಯಸುತ್ತಾನೆ. ಸರ್ಕಾರ ತೆಗೆದುಕೊಳ್ಳುವ ಯಾವುದೇ ಕಠಿಣ ಕ್ರಮವನ್ನು ನಾವು ಬೆಂಬಲಿಸುತ್ತೇವೆ. ಯಾವುದೇ ಕ್ರಮಗಳು ಕಾನೂನು ಮತ್ತು ಸಾಂವಿಧಾನಿಕ ಮೇರೆಯಲ್ಲಿರಬೇಕು. ಶಾಸಕರ ಇಂತಹ ಪ್ರತಿಭಟನೆ ಕೋಮು ಸಂಘರ್ಷ ಉಲ್ಬಣಗೊಳ್ಳಲು ಕಾರಣವಾಗುತ್ತದೆ,” ಎಂದು ಟೀಕರಾಮ್ ಜೂಲಿ ಹೇಳಿದರು.