✍️ ವಕೀಲ ಹಾರಿಸ್ ಬೀರನ್
ಸಾಮಾನ್ಯವಾಗಿ ಸಂಸತ್ತು ಅಂಗೀಕರಿಸಿದ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳಲ್ಲಿ ನ್ಯಾಯಾಲಯಗಳು ಮಧ್ಯಂತರ ಆದೇಶಗಳನ್ನೇ ನೀಡುವುದಿಲ್ಲ. ಪಾರ್ಲಿಮೆಂಟು ಅಂಗೀಕರಿಸಿದ ಕಾನೂನು ಸಂವಿಧಾನದ ಪ್ರಕಾರ ಇರುತ್ತದೆ ಎಂಬ ಅನಿಸಿಕೆಯೋ ಊಹೆಯೋ ಅದಕ್ಕೆ ಕಾರಣವಾಗಿದೆ.
ಆದರೆ ಕೆಲವು ವಿಶೇಷ ಪರಿಸ್ಥಿತಿಯಲ್ಲಿ ಕೋರ್ಟು ಮಧ್ಯಂತರ ಆದೇಶವನ್ನು ನೀಡುತ್ತದೆ. ವಕ್ಫ್ ಮಸೂದೆ ಇಂತಹ ಒಂದು ಪ್ರಕರಣ. ಇದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಮೇಲೆ ಕಳೆದ ಎರಡು ದಿನಗಳಲ್ಲಿ ಸುಪ್ರೀಂ ಕೋರ್ಟಿನಲ್ಲಿ ಹಿಯರಿಂಗ್ ನಡೆದಿತ್ತು. ಜನರಿಗೆ ಸ್ಪಷ್ಟವಾಗಲಿ ಎಂಬ ಕಾರಣದಿಂದ ಈ ಬಗ್ಗೆ ಕೆಲವು ವಿಷಯಗಳನ್ನು ನಾನು ಇಲ್ಲಿ ಹಂಚುತ್ತಿದ್ದೇನೆ. ಹೀಗೆ ನಡೆದ ವಿಚಾರಣೆಯಲ್ಲಿ ಕೆಲವು ಗಂಟೆಗಳವರೆಗೆ ಅರ್ಜಿದಾರರ ವಾದವನ್ನು ಸುಪ್ರೀಂ ಕೋರ್ಟು ಆಲಿಸಿತು. ಆಮೇಲೆ ಕೇಂದ್ರ ಸರಕಾರದ ವಾದವನ್ನೂ ಕೇಳಿಸಿಕೊಂಡಿತು.
ಒಂದೊಂದು ಗಂಟೆಯ ವಾದ ಪ್ರತಿವಾದವನ್ನು ಕೇಳಿದ ಮೇಲೆ ವಕ್ಫ್ ಬಿಲ್ನಲ್ಲಿ ಮಧ್ಯಂತರ ಆದೇಶವನ್ನು ಹೊರಡಿಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟು ಹೇಳಿತು. ನಮ್ಮ ಮನಸ್ಸಿನಲ್ಲಿರುವ ಮಧ್ಯಂತರ ಆದೇಶ ಏನು ಎಂಬುದನ್ನು ಕೂಡ ಸುಪ್ರೀಂ ಕೋರ್ಟು ಬಾಯ್ಮಾತಿನಲ್ಲಿ ತಿಳಿಸಿತು. ಮೊದಲ ದಿನದಲ್ಲಿ ಒಂದು ಮಧ್ಯಂತರ ಆದೇಶ ವನ್ನು ಕೋರ್ಟು ಪಾಸು ಮಾಡುತ್ತದೆ ಎಂಬುದನ್ನು ಕೇಂದ್ರ ಸರಕಾರದ ವಕೀಲರು ಎಂದೂ ನೀರಿಕ್ಷಿಸಿರಲಾರದ ಸಂಗತಿಯಾಗಿದೆ. ಫ್ಲಾಗ್ಶಿಪ್ ಪ್ರಾಜೆಕ್ಟ್ ಎಂದು ಹೇಳುವಂತೆ ಅವರಿಗೆ ಇದೊಂದು ಫ್ಲಾಗ್ ಶಿಪ್ ರೆಜಿಸ್ಟ್ರೇಶನ್ ಆಗಿದೆ.
ಕೇಂದ್ರ ಸರಕಾರದ ವಕೀಲ ಮತ್ತು ಕಕ್ಷಿ ವಕೀಲರಿಗೂ ವಾದಿಸಲು ಸಮಯ ಸಿಕ್ಕಿಲ್ಲ. ನಮ್ಮ ವಾದವನ್ನು ಕೇಳದೆ ಆದೇಶವನ್ನು ಪಾಸು ಮಾಡುವುದು ಸರಿಯಲ್ಲ ಎಂದು ತಿಳಿಸಿದೆವು. ಅದರೊಂದಿಗೆ ಕೋರ್ಟು ವಿಚಾರಣೆಯನ್ನು ಗುರುವಾರ ಎರಡು ಗಂಟೆ ಮುಂದೂಡಿತು. ಮತ್ತೆ ಕೇಸು ವಿಚಾರಣೆಗೆ ಬಂತು. ಕೂಡಲೇ ಮಧ್ಯಂತರ ಆದೇಶ ಪಾಸು ಮಾಡಬಾರದು, ಆದರೆ ಕೆಲವು ವಿಷಯಗಳನ್ನು ನಾವು ಒಪ್ಪಿಕೊಳ್ಳುವೆವು ಎಂದು ಕೇಂದ್ರ ಸರಕಾರದ ವಕೀಲರು ಹೇಳುತ್ತಿದ್ದರು. ಬುಧವಾರ ನಡೆದ ವಿಚಾರಣೆಯಲ್ಲಿ ಅರ್ಜಿದಾರರು ಎತ್ತಿದ ವಾದಗಳಿಗೆ ಮತ್ತು ಕೋರ್ಟು ಕೇಳಿದ ಹಲವು ಪ್ರಶ್ನೆಗಳಿಗೂ ಕೇಂದ್ರ ಸರಕಾರದ ಬಳಿ ಉತ್ತರ ಇಲ್ಲ ಎಂಬ ವಿಷಯ ಅದರಿಂದ ಸ್ಪಷ್ಟವಾಗಿತ್ತು.
ಆದುದರಿಂದ ಅದರಿಂದ ಅವರಿಗೆ ರಕ್ಷೆ ಹೊಂದ ಬೇಕಿತ್ತು. ಕೋರ್ಟಿನ ಆದೇಶ ಬೇಡ, ನಾವೇ ಒಪ್ಪಿಕೊಳ್ಳುತ್ತೇವೆ ಎಂದಾಗ ಕೋರ್ಟು ಅವರಿಗೆ ಹೇಳಿದ್ದು ಇಷ್ಟು- ಎರಡು ವಿಷಯಗಳಲ್ಲಿ ನಮಗೆ ಸ್ಪಷ್ಟತೆ ಬೇಕು. ವಕ್ಫ್ ಬೋರ್ಡ್ನಲ್ಲಿ ಮುಸ್ಲಿಮರಲ್ಲದ ಸದಸ್ಯರನ್ನು ಸೇರಿಸಿಕೊಳ್ಳಬಾರದು. ವಕ್ಫ್ ಬೋರ್ಡನ್ನು ಕೋರ್ಟಿನ ಆದೇಶ ಬರದೆ ಪುರ್ರಚನೆ ಮಾಡಬಾರದು. ಅದಕ್ಕೆ ಕೇಂದ್ರ ಸರಕಾರದ ವಕೀಲರು ಸಮ್ಮತಿ ಸೂಚಿಸಿದರು. ಕೋರ್ಟಿನ ಆದೇಶ ಬರದೇ ವಕ್ಫ್ ಬೋರ್ಡು ಮತ್ತು ವಕ್ಫ್ ಕೌನ್ಸಿಲ್ ಅನ್ನು ಪುರ್ರಚಿಸುವುದಿಲ್ಲ. ಕೋರ್ಟು ಕೇಂದ್ರ ಸರಕಾರದ ವಕೀಲರ ಹೇಳಿಕೆ ಯನ್ನು ದಾಖಲಿಸಿ ತನ್ನ ಆದೇಶದ ಭಾಗ ವಾಗಿ ಮಾಡಿತು.
ಕೋರ್ಟಿನ ತಲೆ ತಿನ್ನುತ್ತಿದ್ದ ಇನ್ನೊಂದು ನಿರ್ಣಾಯಕ ವಿಷಯ ಇತ್ತು. ಉಪಯೋಗಿ ವಕ್ಫ್ ಆಗಿರುವ ವಸ್ತುಗಳು ಮತ್ತು ಸ್ಥಳಗಳು ಹಾಗೂ ಮಸೀದಿಗಳು ಇವೆಲ್ಲದ್ದರ ಭವಿಷ್ಯ ಏನಾಗಬಹುದು ಎಂಬ ಚಿಂತೆಯದು. ಹೊಸ ಕಾನೂನಿನ ಪ್ರಕಾರ ವಿವಾದ ಇರುವ ವಕ್ಫ್ ಆಸ್ತಿಗಳ ಸ್ವಭಾವವನ್ನು ಬದಲಿಸುವುದು ಸರಕಾರದ ಅಧಿಕಾರಿಗಳಿಗೆ ಸಾಧ್ಯವಿದೆ. ಈ ಕುರಿತು ಕೇಳಿದಾಗ ಮೇಲೆ ಸೂಚಿಸಿದ ವಕ್ಫ್ ಸಂಸ್ಥೆಗಳ ಸ್ವಭಾವವನ್ನು ಬದಲಿಸುವುದಿಲ್ಲ. ಅವು ಯಾವ ರೀತಿಯಲ್ಲಿರು ತ್ತದೋ ಆ ರೀತಿಯಲ್ಲಿಯೇ ಮುಂದುವರಿಯುತ್ತದೆ ಎಂದು ಸುಪ್ರೀಂಕೋರ್ಟಿನಲ್ಲಿ ಕೇಂದ್ರ ಸರಕಾರದ ವಕೀಲರು ಹೇಳಿಕೆ ನೀಡಿದರು.
ಈ ಆಧಾರದಲ್ಲಿ ಕೋರ್ಟು ಹೇಳಿದ್ದೇನೆಂದರೆ, ಹೌದು, ಈಗ ಇರುವ ಯಾವ ವಕ್ಫ್ ಸಂಸ್ಥೆಗಳ ಕ್ಯಾರೆಕ್ಟರ್ ಬದಲಿಸಬಾರದು. ಯಥಾಸ್ಥಿತಿ ಮುಂದುವರಿಯಬೇಕು. ಹೀಗೆಯೇ ಎರಡು ಪ್ರಧಾನ ವಿಷಯಗಳಲ್ಲಿ ಸರಕಾರದ ಹೇಳಿಕೆಗಳನ್ನು ಕೋರ್ಟು ದಾಖಲಿಸಿಕೊಂಡಿತು. ಇವುಗಳಿರುವ ಕೋರ್ಟಿನ ಆದೇಶವೂ ಹೊರ ಬಂತು.
ಇವೆಲ್ಲದ್ದರ ತಳಹದಿ ಸಮಸ್ಯೆ ಏನೆಂದರೆ ವಕ್ಫ್ ಅಂದರೆ ಏನೆಂದು ಗೊತ್ತಿಲ್ಲದೆಯೇ ಕಾನೂನು ರಚಿಸಿದ್ದಾಗಿದೆ. ಜಂಟಿ ಪಾರ್ಲಿಮೆಂಟ್ ಸಮಿತಿಯಲ್ಲಿ ಹಿಯರಿಂಗಿಗೆ ಹೋಗಿದ್ದೆ. ಈ ನೆಲೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಆ ಜೆಪಿಸಿಯ ಮುಂದೆ ನಾನು ವಾದಿಸಿದ್ದೆ. ನಮ್ಮ ವಾದಗಳೆಲ್ಲ ಮುಗಿದ ಬಳಿಕ ಒಬ್ಬ ಬಿಜೆಪಿ ಸದಸ್ಯ ಬಾಯ್ಬಿಟ್ಟು ಹೇಳಿದರು, ಈಗ ನಮಗೆ ವಕ್ಫ್ ಅಂದರೆ ಏನೆಂದು ಗೊತ್ತಾಯ್ತು ಅಂತ.
ಈ ಸಮಸ್ಯೆಯನ್ನು ನಮಗೆ ಹೊಸ ವಕ್ಫ್ ಕಾನೂನಿನಲ್ಲಿ ಕಾಣಲು ಸಾಧ್ಯವಿದೆ. ವಕ್ಫ್ ಒಬ್ಬ ವ್ಯಕ್ತಿಯ ಖಾಸಗಿ ಆಸ್ತಿ. ಆ ಖಾಸಗಿ ಆಸ್ತಿ ಆತ ದೇವನಿಗೆ ಸಮರ್ಪಿಸಿದ್ದು. ಇವಲ್ಲದೆ ಸರಕಾರದ್ದೋ ಅಥವಾ ಬೇರೆಯವರ ಭೂಮಿಯನ್ನೋ ವಶಪಡಿಸಿ ಕೊಂಡಿರುವುದಲ್ಲ. 2013ರಲ್ಲಿ ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಕಾನೂನು ತಂದಿತು. ಆಗ ಅದರ ಹಿಂದೆ ಬಹಳಷ್ಟು ಹೋಮ್ ವರ್ಕ್ ನಡೆದಿತ್ತು.
ಸಚ್ಚಾರ್ ಕಮಿಟಿ ವರದಿ, ಜಂಟಿ ಪಾರ್ಲಿಮೆಂಟು ಸಮಿತಿ ವರದಿ, ಒಂದು ಹೈಲೆವೆಲ್ ಕಮಿಟಿ ವರದಿ… ಇವು ಮೂರನ್ನು ಆಧಾರವಾಗಿಟ್ಟು 2013ರ ತಿದ್ದುಪಡಿಯನ್ನು ಸರಕಾರ ತಂದಿತ್ತು. ಅದರ ಬಗ್ಗೆ ಸಚ್ಚಾರ್ ಕಮಿಟಿ ವರದಿಯಲ್ಲಿ ಒಂದು ಅಧ್ಯಾಯವಿತ್ತು. ಪರಭಾರೆಯಾಗಿರುವ ವಕ್ಫ್ ಜಮೀನುಗಳ ಬಗ್ಗೆ. ಅದು ಏನೆಂದರೆ, ಅದನ್ನು ಮತ್ತೆ ವಶಪಡಿಸಿಕೊಳ್ಳುವ ಅಗತ್ಯದ ಕುರಿತು ಮತ್ತು ಅದಕ್ಕಾಗಿ ವಕ್ಫ್ ಕಾನೂನು ಗಟ್ಟಿಮಾಡಬೇಕಾಗಿರುವುದರ ಕುರಿತು ಶಿಫಾರಸ್ಸು ಅದು.
1970ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಇದಕ್ಕೆ ಸಂಬAಧಿಸಿ ರಾಜ್ಯಗಳಿಗೆ ಒಂದು ಪತ್ರ ಬರೆದಿದ್ದರು. ಅದನ್ನು ಕೂಡ ಈ ಅಧ್ಯಾಯದಲ್ಲಿ ಸೇರಿಸಲಾಗಿತ್ತು. ಇಂದಿರಾಗಾಂಧಿ ಪ್ರಕಾರ, ಬಹಳ ವಕ್ಫ್ ಜಮೀನನ್ನು ಸರಕಾರವೋ ಸರಕಾರಿ ಸಂಸ್ಥೆಯೋ ವಶದಲ್ಲಿರಿಸಿಕೊಂಡಿವೆ. ಅದನ್ನು ವಕ್ಫ್ ಬೋರ್ಡಿಗೆ ಹಿಂದಿರುಗಿಸಬೇಕು. ಕೊಡಲೇ ಸಾಧ್ಯವಿಲ್ಲದ್ದು, ಆದರೆ ಅದರ ಬೆಲೆಯನ್ನು ವಕ್ಫ್ಗೆ ಪಾವತಿಸಬೇಕು.
ಅದರ ಅರ್ಥ ಬಹಳಷ್ಟು ವಕ್ಫ್ ಜಮೀನು ಒತ್ತುವರಿ ಮಾಡಲ್ಪಟ್ಟಿವೆ. ಕಾನೂನು ವಕ್ಫ್ ಜಮೀನು ಮರು ವಶಪಡಿಸಿಕೊಳ್ಳಲು ಬಲಿಷ್ಠವಾಗಿಲ್ಲ. ಅದನ್ನು ಶಕ್ತಿಶಾಲಿ ಮಾಡಿ ಎಂದು ಸಚ್ಚಾರ್ ಕಮಿಟಿ ಹೇಳಿತ್ತು. ಕಾನೂನು ಮಾಡುವ ಮೊದಲು ಎಲ್ಲ ರಾಜಕೀಯ ಪಾರ್ಟಿಗಳ ಸದಸ್ಯರನ್ನು ಜಂಟಿ ಪಾರ್ಲಿಮೆಂಟ್ ಸಮಿತಿ ರಚಿಸಿ ಅದಕ್ಕೆ ಕರೆಯಿಸಿಕೊಂಡು ಅಭಿಪ್ರಾಯ ಕೇಳಲಾಯಿತು. ನಂತರ ಒಂದು ಹೈಪವರ್ ಕಮಿಟಿ ಇತ್ತು. 2013ರಲ್ಲಿ ಇವೆಲ್ಲವನ್ನೂ ಆಧಾರವಾಗಿಟ್ಟು ವಕ್ಫ್ ತಿದ್ದುಪಡಿ ಕಾನೂನು ತರಲಾಯಿತು.
ಆದ್ದರಿಂದಲೇ ಈ ಕಾನೂನನ್ನು ಯಾರೂ ಪಾರ್ಲಿಮೆಂಟಿನಲ್ಲಿ ವಿರೋಧಿ ಸಲಿಲ್ಲ. ಒಕ್ಕೊರಳಿ ನಿಂದ ಬಿಜೆಪಿ ಮತ್ತು ಇತರ ರಾಜಕೀಯ ಪಾರ್ಟಿಗಳು ಅದನ್ನು ಬೆಂಬಲಿಸಿವೆ. ಹೀಗೆ ಅಂದು ಆ ಕಾನೂನು ಪಾಸಾಗಿರುವುದರ ಕತೆಯಾಗಿದೆ. ಆ ಕಾನೂನು ಒತ್ತುವರಿ ಮಾಡಿದ ವಕ್ಫ್ ಆಸ್ತಿಯನ್ನು ಮರು ವಶಪಡಿಸುವುದಕ್ಕಾಗಿತ್ತು.
ಆದರೆ, ಈಗ ಬಂದ ಹೊಸ ಕಾನೂನು ವಕ್ಫ್ ಆಸ್ತಿಗಳನ್ನು ತೆರವುಗೊಳಿಸುವ ಕ್ರಿಯೆ ಎಂಬ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದಾಗಿದೆ. ಈಗ ಕಾ ನೂನಿನ ಬಗ್ಗೆ ವಕ್ಫ್ ಒತ್ತುವರಿಯಿಂದ ಸರಕಾರಿ ಜಮೀನು ಮತ್ತು ಇತರ ವ್ಯಕ್ತಿಗಳನ್ನು ರಕ್ಷಿಸಲು ಕಾನೂನು ಮಾಡಿದ್ದೆಂದು ಜನರ ಮುಂದೆ ಮಂಡಿಸುತ್ತಿರುವ ವ್ಯಾಖ್ಯೆಯಾಗಿದೆ. ಆದ್ದರಿಂದ ಇದರಲ್ಲಿ ಶಂಕೆ ಎದ್ದಿರುವುದು. ಕೇಂದ್ರ ಸರಕಾರವು ನಮಗೆ ಮೋಸ ಮಾಡಿದೆ ಎಂದು ಕೆಲವರಿಗೆ ಅರ್ಥವೂ ಆಗಿದೆ.
ಜೆಪಿಸಿಯ ಮುಂದೆ 92 ಲಕ್ಷ ರೆಪ್ರಸಂಟೇಶನ್ಗಳು ಸಿಕ್ಕವು. ಇದರ ಆಧಾರದಲ್ಲೇ ಕಾನೂನು ರೂಪಿಸಿದ್ದು ಎಂದು ಕೇಂದ್ರ ಸರಕಾರದ ವಕೀಲರು ವಾದಿಸಿದ್ದಾರೆ. ಈ ಸಿಕ್ಕಿದ್ದರಲ್ಲಿ ಶೇ.99 ರಷ್ಟು ಮಸೂದೆಯನ್ನು ವಿರೋಧಿಸಿದ ರೆಪ್ರೆಸಂಟೇಶನ್ಗಳೇ ಆಗಿರಬಹುದು. 44 ತಿದ್ದು ಪಡಿಗಳನ್ನು ಪ್ರತಿಪಕ್ಷದವರು ಎತ್ತಿದ್ದರೂ ಅದರಲ್ಲಿ ಒಂದು ಕೂಡ ತೆಗೆದುಕೊಳ್ಳಲಿಲ್ಲ. ಹಾಗಿರುವಾಗ ಹೇಗೆ ಇದನ್ನು ಪ್ರಜಾಪ್ರಭುತ್ವ ಪರ ಕಾನೂನು ನಿರ್ಮಾಣ ಎಂದು ಕರೆಯೋದು?
ಪಾರ್ಲಿಮೆಂಟಿನಲ್ಲಿ ತಮಗಿರುವ ಸದಸ್ಯ ಬಲದ ಲಾಭ ಪಡೆದು ಕಾನೂನು ಪಾಸು ಮಾಡಲು ಸಾಧ್ಯವಾಗಬಹುದಾಗಿದೆ. ಆದರೆ, ಆ ಕಾನೂನು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವೋ ಅನುಸಾರವೋ ಎಂದು ಸೂಕ್ಷ್ಮವಾಗಿ ಪರಿಶೀಲಿಸುವುದು ಕೋರ್ಟಿನ ಮುಂದಿದೆ. ಈ ಪರಿ ಶೀಲನೆಯನ್ನು ಕೋರ್ಟು ಈಗ ಮಾಡುತ್ತಿರುವುದಾಗಿದೆ. ನ್ಯಾಯ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಜನರಿದ್ದಾರೆ.












