ಸನ್ಮಾರ್ಗ ವಾರ್ತೆ
ಉತ್ತರಾಖಂಡದ ಪ್ರವಾಸಿ ತಾಣವಾದ ಮಸ್ಸೂರಿಯಲ್ಲಿ ಕಾಶ್ಮೀರಿ ಶಾಲ್ ಮಾರಾಟಗಾರರ ಮೇಲೆ ದೌರ್ಜನ್ಯ ನಡೆದಿದೆ. ಇಬ್ಬರು ಕಾಶ್ಮೀರಿ ಶಾಲ್ ಮಾರಾಟಗಾರರನ್ನು ಜನರ ಒಂದು ಗುಂಪು ಥಳಿಸಿದ್ದಲ್ಲದೆ ಇವರ ಅಂಗಡಿಯನ್ನು ಮುಚ್ಚಿದೆ.
ಮೂವರು ವ್ಯಕ್ತಿಗಳು ಸೇರಿ ಇವರನ್ನು ಥಳಿಸುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿದೆ. ರಸ್ತೆ ಬದಿಯಲ್ಲಿ ಇವರು ಶಾಲ್ ಮಾರಾಟಕ್ಕೆ ಇಟ್ಟಿದ್ದರು. ಅಲ್ಲಿಂದ ಹೊರಟು ಹೋಗುವಂತೆ ಈ ದುಷ್ಕರ್ಮಿಗಳು ಇವರ ಮೇಲೆ ಒತ್ತಡ ಹಾಕಿದ್ದಾರೆ, ಆಧಾರ್ ಕಾರ್ಡ್ ಅನ್ನು ಪಡೆದು ಭಾರತೀಯರು ಎಂದು ಸ್ಪಷ್ಟಪಡಿಸಿಕೊಂಡ ಬಳಿಕ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆ ಇಬ್ಬರು ಕಾಶ್ಮೀರಿ ಬಟ್ಟೆ ವ್ಯಾಪಾರಿಗಳು ಹೇಳಿದ್ದಾರೆ..ಈ ವಿಡಿಯೋಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ಸೂರಜ್ ಸಿಂಗ್ ಪ್ರದೀಪ್ ಸಿಂಗ್ ಮತ್ತು ಅಭಿಷೇಕ್ ಹುನ್ಯಾಲ್ ಎಂಬ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
https://x.com/HateDetectors/status/1917304539553882572?t=643dJ3SRilVGQf69i6Gg0Q&s=19












