ತನ್ನ ಮಗನ ಸೋಲಿನ ಹೊಣೆಯನ್ನು ಸಚಿನ್ ಪೈಲೆಟ್ ಹೊತ್ತುಕೊಳ್ಳಲಿ- ರಾಜಸ್ತಾನ ಮುಖ್ಯಮಂತ್ರಿ ಗೆಹ್ಲೋಟ್

0
1010

ಜೈಪುರ,ಜೂ.4: ಲೋಕಸಭಾ ಚುನಾವಣೆಯಲ್ಲಿ ತನ್ನ ಪುತ್ರನ ಸೋಲಿನ ಹೊಣೆಯನ್ನು ಸಚಿನ್ ಪೈಲೆಟ್ ವಹಿಸಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಗೆಲ್ಲುವ ಕ್ಷೇತ್ರದಲ್ಲಿ ಪುತ್ರ ವೈಭವ್‍ಗೆ ಭಾರೀ ಸೋಲು ಆಗಿದೆ. ವೈಭವ್‍ನನ್ನು ಬಿಜೆಪಿಯ ಗಜೇಂದ್ರ ಸಿಂಗ್ ಶೇಖಾವತ್ ನಾಲ್ಕು ಲಕ್ಷ ಮತಗಳಿಂದ ಸೋಲಿಸಿದ್ದಾರೆ. ಇಲ್ಲಿ ಕಾಂಗ್ರೆಸ್‍ಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದಿದ್ದರು ಸಚಿನ್ ಪೈಲಟ್. ಆದರೆ ಎಲ್ಲವೂ ತಿರುವು ಮುರುವು ಆಗಿದೆ ಎಂದು ರಾಜಸ್ತಾನ ಮುಖ್ಯ ಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಜೋಧ್‍ಪುರ ಜಿಲ್ಲೆಯಲ್ಲಿ ಕಾಂಗ್ರೆಸ್‍ನ ಆರು ಶಾಶಕರಿದ್ದಾರೆ. ಅಲ್ಲಿ ಪಾರ್ಟಿ ಉತ್ತಮ ಪ್ರಚಾರವನ್ನು ಕೂಡ ಮಾಡಿದೆ. ಹಾಗಿದ್ದೂ ಸೀಟು ಕೈಜಾರಿದ್ದು ಹೇಗೆ, ಈ ಜವಾಬ್ದಾರಿ ಸಚಿನ್ ಮೇಲಿದೆ. ಜೋಧಪುರದ ಸೋಲಿನ ಕಾರಣ ಪತ್ತೆ ಮಾಡಲು ಚುನಾವಣಾ ಫಲಿತಾಂಶದ ಪೋಸ್ಟ್ ಮಾರ್ಟಂ ಮಾಡಬೇಕೆಂದು ಗೆಹ್ಲೋಟ್ ಹೇಳಿದರು. ಮುಖ್ಯಮಂತ್ರಿ ಗೆಹ್ಲೋಟ್‍ರ ಕಾರ್ಯಶೈಲಿಗೆ ಸೋಲಿಗೆ ಕಾರಣ ಎಂದು ಸಚಿನ್ ಪೈಲಟ್ ಕೂಡ ಆರೋಪಿಸಿದ್ದರು. ಇದಕ್ಕೆ ಉತ್ತರವಾಗಿ ಸೋಲಿನ ಹೊಣೆಯನ್ನು ಹೊತ್ತುಕೊಳ್ಳಲು ಯಾರೂ ಸಿದ್ಧರಿಲ್ಲ ಎಂದು ಗೆಹ್ಲೋಟ್ ಪ್ರತಿಕ್ರಿಯಿಸಿದರು.