ವಿದೇಶ ಪ್ರವಾಸಕ್ಕೆ ಉತ್ಸಾಹ, ಮಣಿಪುರದ ನೋವಿಗೆ ನಿರ್ಲಕ್ಷ್ಯ: ಮೋದಿ ವಿರುದ್ಧ ಜೈರಾಮ್ ರಮೇಶ್ ಟೀಕೆ

0
777

ಸನ್ಮಾರ್ಗ ವಾರ್ತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮೂರು ರಾಷ್ಟ್ರಗಳ ಪ್ರವಾಸಕ್ಕೆ ತೆರಳಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತೀವ್ರ ಟೀಕೆ ಮಾಡಿದ್ದಾರೆ. ಮೋದಿಯವರು ವಿದೇಶ ಪ್ರವಾಸಗಳಿಗೆ ಶಕ್ತಿ, ಉತ್ಸಾಹ ಮತ್ತು ಉತ್ಸುಕತೆಯೊಂದಿಗೆ ಹೋಗುತ್ತಾರೆ, ಆದರೆ ಮಣಿಪುರದ ಜನರ ನೋವಿಗೆ ಯಾವುದೇ ಸಹಾನುಭೂತಿ ತೋರಿಸುತ್ತಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.

ಮೇ 2023ರಿಂದ ಇಲ್ಲಿವರೆಗೆ ಪ್ರಧಾನಿ ಮೋದಿಯವರು 35 ವಿದೇಶ ಪ್ರವಾಸ ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಮಣಿಪುರದ ಜನರು ಒಂದು ವರ್ಷದಷ್ಟು ಕಾಲ ಸಂಕಷ್ಟ ಅನುಭವಿಸುತ್ತಿದ್ದರೂ ಅವರತ್ತ ಅವರು ತಿರುಗಿ ನೋಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಮಣಿಪುರಕ್ಕೆ ಭೇಟಿ ನೀಡದಿರುವುದು ಪ್ರಧಾನಿಯವರ ಮನೋಭಾವವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಜೈರಾಮ್ ರಮೇಶ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಭಾನುವಾರ ಬೆಳಿಗ್ಗೆ ಪ್ರಧಾನಿ ಮೋದಿ ಕೆನಡಾ ಮತ್ತು ಕ್ರೊಯೇಷಿಯಾಕ್ಕೆ ಅಧಿಕೃತ ಸರ್ಪ್ರೈಸ್ ಭೇಟಿಗೆ ತೆರಳಿದರು.