ತುತ್ತು ಅನ್ನಕ್ಕಾಗಿ ನೆರವು ಕೇಂದ್ರಗಳ ಮುಂದೆ ನಿಂತ ಗಾಝಾದ ಜನರನ್ನು ಉದ್ದೇಶಪೂರ್ವಕವಾಗಿಯೇ ಕೊಲ್ಲಲಾಗಿದೆ: ಇಸ್ರೇಲ್ ಪತ್ರಿಕೆ ವರದಿ

0
460

ಸನ್ಮಾರ್ಗ ವಾರ್ತೆ

ತುತ್ತು ಅನ್ನಕ್ಕಾಗಿ ನೆರವು ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲುವ ಗಾಝಾದ ಜನರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಉನ್ನತ ಅಧಿಕಾರಿಗಳು ಆದೇಶಿಸಿರುವುದಾಗಿ ಇಸ್ರೇಲಿನ ಪ್ರಮುಖ ಪತ್ರಿಕೆಯಾದ ಹಾರೆಟ್ಸ್ ವರದಿ ಮಾಡಿದೆ. ಇರಾನಿನ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದ್ದ ಅದೇ ಸಮಯದಲ್ಲಿ ಗಾಝಾದಲ್ಲಿ ಇಸ್ರೇಲಿ ಸೇನೆ ನೂರಾರು ಬಡ ನಾಗರಿಕರನ್ನು ಗುಂಡು ಹಾರಿಸಿ ಕೊಂದಿತ್ತು. ಇದೀಗ ಈ ಹತ್ಯೆಯ ಹಿಂದೆ ಯೋಜಿತ ಷಡ್ಯಂತ್ರವೇ ಇದೆ ಅನ್ನೋದು ಬಹಿರಂಗವಾಗಿದೆ.

ಒಂದು ಹೊತ್ತಿನ ಊಟಕ್ಕಾಗಿ ನೆರವು ಕೇಂದ್ರಗಳ ಮುಂದೆ ಓಡಿ ಬರುತ್ತಿದ್ದ ಜನರ ವಿರುದ್ಧ ಇಸ್ರೇಲ್ ಸೈನಿಕರು ಗುಂಡು ಹಾರಿಸುತ್ತಿದ್ದರು. ಮಾತ್ರ ಅಲ್ಲ ಈ ಹಸಿದವರ ದಾಳಿಯನ್ನು ತಡೆಯುವುದಕ್ಕೆ ತಾವು ಹೀಗೆ ಗುಂಡು ಹಾರಿಸುತ್ತಿರುವುದಾಗಿ ಸಮರ್ಥಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಬಂದ ವರದಿ ಎಲ್ಲ ವಾದಗಳೂ ಸುಳ್ಳು ಎಂದು ಹೇಳಿದೆ.

ಜುಲೈ 20 ರವರೆಗಿನ ಲೆಕ್ಕಾಚಾರದ ಪ್ರಕಾರ ಹೀಗೆ ಹಸಿದು ಬಂದ 549 ಮಂದಿಯನ್ನು ಇಸ್ರೇಲ್ ಸೈನಿಕರು ಕೊಂದಿದ್ದಾರೆ. 4066 ಮಂದಿಯನ್ನು ಗಾಯಗೊಳಿಸಿದ್ದಾರೆ.