ಬಾಂಗ್ಲಾದೇಶಿಯರೆಂದು ಹೇಳಿ ಬಂಗಾಳಿ ಮುಸ್ಲಿಮರ ಮೇಲೆ ದೌರ್ಜನ್ಯ

0
437

ಸನ್ಮಾರ್ಗ ವಾರ್ತೆ

ದೆಹಲಿಯ ಪೊಲೀಸರು ಬಂಗಾಳಿ ಮುಸ್ಲಿಮರನ್ನು ಬಾಂಗ್ಲಾದೇಶದ ಮುಸ್ಲಿಮರೆಂದು ಹೇಳಿ ಹಿಂಸಿಸುತ್ತಿದ್ದಾರೆ ಎಂದು ಮಾನವ ಹಕ್ಕು ಕಾರ್ಯಕರ್ತರು ಆರೋಪಿಸಿದ್ದಾರೆ. ದೆಹಲಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಬಂಗಾಳದಿಂದ ವಲಸೆ ಬಂದ ಮುಸ್ಲಿಮರು ಕೆಲಸ ಮಾಡುತ್ತಿದ್ದು ಅವರನ್ನು ಬಾಂಗ್ಲಾದೇಶದ ಮುಸ್ಲಿಮರೆಂದು ಹೇಳಿ ಪೊಲೀಸರು ತೀವ್ರವಾಗಿ ದೌರ್ಜನ್ಯ ನಡೆಸಿದ್ದಾರೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

ಜೂನ್ 25ರಂದು ದೆಹಲಿ ಪೊಲೀಸರು ಇಟ್ಟಿಗೆ ಕಾರ್ಖಾನೆಯಿಂದ ಏಳು ಮಂದಿ ಮುಸ್ಲಿಮರನ್ನು ಭಂದಿಸಿದರು. ಇವರೆಲ್ಲರೂ ಬಂಗಾಳಿ ಮಾತಾಡುವವರು. ಇವರಲ್ಲಿ 11 ವರ್ಷ ಮತ್ತು ಆರು ವರ್ಷದ ಮಕ್ಕಳೂ ಇದ್ದರು.

ನಿಮ್ಮ ದಾಖಲೆಯನ್ನು ಪರಿಶೀಲಿಸಿ ಬಿಡುಗಡೆಗೊಳಿಸುತ್ತೇವೆ ಎಂದು ಹೇಳಿದ ಪೊಲೀಸರು ಆ ಬಳಿಕ ಬಂಧಿಸಿದರು ಎಂದು ಓರ್ವ ವ್ಯಕ್ತಿಯ ಪತ್ನಿ ಹೇಳಿದ್ದಾರೆ. ಇವರೆಲ್ಲರೂ ಪಶ್ಚಿಮ ಬಂಗಾಳದಿಂದ ವಲಸೆ ಬಂದವರು ಮತ್ತು ಹರಿಯಾಣದ ಇಟ್ಟಿಗೆ ಕಾರ್ಖಾನೆಯಲ್ಲಿ ದುಡಿಯುವವರಾಗಿದ್ದಾರೆ.