✍️ ಸವಾದ್ ರಹ್ಮಾನ್
ಝಾನ್ಸಿಯ ಹೆಸರು ಕೇಳುವಾಗ ನಮಗೆ ಸಾಮ್ರಾಜ್ಯ ಶಾಹಿಗಳ ವಿರುದ್ಧ ಹುತಾತ್ಮರಾದ ಧೀರೆ ರಾಣಿ ಲಕ್ಷ್ಮಿ ಬಾಯಿ ಮತ್ತು ಭಾರತದ ಸೇನೆಯ ಮಹಿಳಾ ವಿಂಗ್ ರಾಣಿ ರೆಜಿಮೆಂಟ್ ನೆನಪಾಗುತ್ತದೆ. ಆದರೆ ಝಾನ್ಸಿ ಇತ್ತೀಚೆಗೆ ಇನ್ನೊಂದು ಕಾರಣಕ್ಕೆ ಸುದ್ದಿಯಾಯಿತು. ಜೂನ್ 19ಕ್ಕೆ ಹೊಸದಿಲ್ಲಿ-ಭೋಪಾಲ್ ವಂದೇ ಭಾರತ್ ಎಕ್ಸ್ಪ್ರೆಸ್ ಝಾನ್ಸಿ ನಿಲ್ದಾಣಕ್ಕೆ ತಲುಪಿದಾಗ ನಡೆದ ಗಲಾಟೆಯಿಂದ. ಒಬ್ಬ ವ್ಯಕ್ತಿ ಶಾಸಕನಿಗೆ ತನ್ನ ಹೆಸರಿನಲ್ಲಿ ಬುಕ್ಕಿಂಗ್ ಆದ ರೈಲಿನ ಸೀಟನ್ನು ಬಿಟ್ಟುಕೊಡಲು ಒಪ್ಪಿ ಕೊಳ್ಳಲಿಲ್ಲ. ಇದಕ್ಕಾಗಿ ರಾಜ್ಪ್ರಕಾಶ್ ಎಂಬ ಪ್ರಯಾಣಿಕನನ್ನು ಈ ಶಾಸಕನ ಅನುಯಾಯಿಗಳು ರಕ್ತ ಸುರಿಯುವಂತೆ ಬೆಂಡೆತ್ತಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಪೆಟ್ಟು ಕೊಡುತ್ತಿರುವ ವೀಡಿಯೊ ಹರಿದಾಡಿತು. ಆಗಲೂ ಪೆಟ್ಟು ತಿಂದ ಪ್ರಯಾಣಿಕ ಹೇಳಿಕೆ ನೀಡಲು ಸಿದ್ಧನಾಗಲಿಲ್ಲ. ಹೀಗೆಂದು ರೈಲ್ವೆ ಪೊಲೀಸರು ಹೇಳುತ್ತಿದ್ದಾರೆ.
ರಾಜ್ ಪ್ರಕಾಶ್ ವಿರುದ್ಧ ಕೆಟ್ಟದಾಗಿ ವರ್ತಿಸಿದ್ದಾನೆ ಎಂದು ಪೊಲೀಸು ಕೇಸು ಹಾಕಲಾಗಿದೆ. ಇಂತಹದ್ದೆಲ್ಲವೂ ಎಲ್ಲಿ ನಮ್ಮ ಭಾರತದಲ್ಲಿ. ಆದರೆ ಸಾಮಾನ್ಯವಾಗಿ ರಾಜಾಳ್ವಿಕೆ, ತುರ್ತು ಪರಿಸ್ಥಿತಿ ಅಥವಾ ಅರಾಜಕ ಸ್ಥಿತಿಯಿರುವ ನಾಡಿನಲ್ಲಿ ಮಾತ್ರವ ನ್ನು ಹೀಗೆ ಸಂಭವಿಸುತ್ತಿರುತ್ತದೆ. ಸಂಘಪರಿವಾರ ತುರ್ತು ಪರಿಸ್ಥಿತಿಯ ಕ್ರೌರ್ಯವನ್ನು ಸ್ಮರಣೆಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಬಲ್ಲುದು. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಅನ್ನು ಬಿಜೆಪಿ ನಿರಂತರ ದೂಷಿಸುತ್ತದೆ. ಇದೇ ಬಿಜೆಪಿಯ ಉತ್ತರ ಪ್ರದೇ ಶದ ಶಾಸಕನಿಗಾಗಿ ರೈಲು ಪ್ರಯಾಣಿಕನನ್ನು ಶಾಸಕರ ಜನರು ಹೊಡೆದಿದ್ದಾರೆ.
ತುರ್ತು ಪರಿಸ್ಥಿತಿಯ ಹುತಾತ್ಮರು ಎಂದು ಬಿಜೆಪಿ ದೇಶವಿಡೀ ಕಾರ್ಯಕ್ರಮ ಮಾಡಿದೆ. ಆದರೆ ಇದೇ ಸಂಘಪರಿವಾರದ ಕಳೆದ ಹನ್ನೊಂದು ವರ್ಷದ ಆಳ್ವಿಕೆಯಲ್ಲಿ ಭಾರತದಲ್ಲಿ ಅದು ಕೂಡ ವಿಶ್ವದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ತುರ್ತು ಪರಿಸ್ಥಿತಿ ತರಲು ಇಂದು ಒಂದು ಘೋಷಣೆ ಅಥವಾ ಸಹಿ ಹಾಕುವ ಔಪಚಾರಿಕ ಕ್ರಮಗಳು ಕೂಡ ಅಗತ್ಯವಿಲ್ಲ ಎಂಬುದನ್ನು ಮೇಲೆ ಹೇಳಿದ ಘಟನೆ ನೆನಪಿಸುತ್ತದೆ.
ತಾರತಮ್ಯದಿಂದ ಕೂಡಿದ ಪೌರತ್ವ ಕಾನೂನು ವಿರೋಧಿಸಿದ್ದಕ್ಕೆ, ಆದಿವಾಸಿ ಸರ್ವನಾ ಶವನ್ನು ಪ್ರತಿಭಟಿಸಿದ್ದಕ್ಕೆ, ಕೈಗಾರಿಕೆಯ ಮಾಲಿನ್ಯಗಳ ಕುರಿತು ಮತ್ತು ಶೋಷಣೆಯ ಕುರಿತು ಕರಪತ್ರ ಬರೆದದ್ದಕ್ಕೆ ಸಾವಿರ ದಿನಗಳವರೆಗೆ ಜೈಲು ಕೋಣೆಯಲ್ಲಿರಬೇಕಾದವರು ಮತ್ತು ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋದವರಿಗೂ ಖಂಡಿತ ಅಂತರ ಇದೆ. ಅದುವೇ ಇದು. ಅಂದಿನ ಪ್ರಧಾನಿ ಮತ್ತು ಅವರ ಪುತ್ರ ಇಬ್ಬರೂ ಸೇರಿ ಸಂವಿಧಾವನ್ನು ಬುಡಮೇಲು ಗೊಳಿಸಿದ್ದರು. ಇಂದು ಸಂವಿಧಾನ ಮತ್ತು ಅದರ ಕಡಿವಾಣ ಹಿಡಿದುಕೊಂಡಿರುವ ಸಂಘಪರಿವಾರಕ್ಕೆ ಇಷ್ಟ ವಿಲ್ಲದ ಆಹಾರಗಳನ್ನು ಆಚಾರಗಳನ್ನು ನಂಬಿಕೆಗಳು ದೇಶದ್ರೋಹ. ಈ ರೀತಿ ಬದಲಾದ ಎಷ್ಟೊ ದೃಶ್ಯಗಳು ಪ್ರತೀ ದಿನ ಇಂದು ಕಾಣಸಿಗುತ್ತಿವೆ.
ಬೀಫ್ ತಿಂದದ್ದಕ್ಕೆ, ಮಾರಿದ್ದಕ್ಕೆ, ವಾಹನದಲ್ಲಿ ಕೊಂಡು ಹೋದದ್ದಕ್ಕೆ, ಮನೆಯಲ್ಲಿಟ್ಟದ್ದಕ್ಕೆ ದಾಳಿ ಮಾಡಿ, ಹೊಡೆದು ಕೊಂದ ಘಟನೆಗಳು ನಡೆಯುತ್ತವೆ. ಅದಕ್ಕೆ ಲೆಕ್ಕ ಇಲ್ಲ. ರಾಜ್ಯಗಳ ಮುಖ್ಯಮಂತ್ರಿಗಳು ರಾಕೀಯ ನಾಯಕರನ್ನು ಆರೋಪ ಪಟ್ಟಿ ಸಲ್ಲಿಸದೆ ಜೈಲಿನೊಳಗೆ ತಳ್ಳುತ್ತಿದ್ದಾರೆ.
ಸಾರ್ವಜನಿಕ ಕಾರ್ಯಕರ್ತರು ಮತ್ತು ಮಾಧ್ಯಮಗಳು ಪೌರತ್ವ ಹಕ್ಕಿಗಾಗಿ ಧ್ವನಿ ಎತ್ತುವುದು, ಸರಕಾರದ ಎಡಬಿಡಂಗಿತನಗಳನ್ನು ವಿರೋಧಿಸು ವುದು ಬಹು ದೊಡ್ಡ ಅಪರಾಧ ಆಗಿರುವ ಕಾಲ ಇದು. ದ್ವೇಷವನ್ನು ವಿರೋಧಿಸುವ ಲೇಖಕರು, ಪತ್ರಕರ್ತರು ಜೈಲೊಳಗೆ ಅನಿರ್ದಿಷ್ಟ ಕಾಲಕ್ಕೆ ಕೂತಿರಬೇಕಾಗುತ್ತದೆ. ಒಂದು ವೇಳೆ ಅದು ಇಲ್ಲ ಎಂದಾದರೆ ಮರಣ ದಂಡನೆಗೆ ಒಳಗಾಗಬೇಕು. ಸ್ಟ್ಯಾನ್ ಸ್ವಾಮಿ, ಗೌರಿ ಲಂಕೇಶ್, ಕಲಬುರಗಿಯವರಂತೆ. ಅಧಿಕಾರಿಗಳು ಮಾಧ್ಯಮಗಳ ಬಾಯಿ ಮುಚ್ಚಿಸುವುದು ಅಲ್ಲ. ಸರಕಾರದ ಮಾಡಬಾರದ್ದಕ್ಕೆಲ್ಲ ಒತ್ತಾಗಿ ನಿಂತು ಸ್ವಯಂ ಒಂದು ಅಪರಾಧ ಕೂಟವಾಗಿ ಬದಲಾಗಿವೆ.
1975 ತುರ್ತು ಪರಿಸ್ಥಿತಿಯಲ್ಲಿ ಪ್ರಬೀರ್ ಪುರಕಾಯಸ್ತರು ವಿದ್ಯಾರ್ಥಿ ನಾಯಕನೆಂದು ಜೈಲಿಗೆ ತಳ್ಳಲ್ಪಟ್ಟಿದ್ದರು. ಅದೇ ಪುರಕಾಯಸ್ತರು 2021 ರಲ್ಲಿ ಸರಕಾರಕ್ಕೆ ಇಷ್ಟವಿಲ್ಲದ ಸುದ್ದಿ ಕೊಡುವ ನ್ಯೂಸ್ ಕ್ಲಿಕ್ ಪೋರ್ಟಲ್ನ ಯಜಮಾನ ಎಂದು ಬಂಧಿಸಲ್ಪಟ್ಟರು. ಪತ್ರಕರ್ತ ಸಿದ್ದೀಕ್ ಕಾಪ್ಪನ್, ಈಗಲೂ ಜೈಲೊಳಗೆ ಇರುವ ಪತ್ರಕರ್ತ ರೂಪೇಶ್ ಕುಮಾರ್ ಸಿಂಗ್ ಮುಂತಾ ದವರ ಅಪರಾಧವೂ ಅದುವೇ ಆಗಿದೆ. ಸರಕಾರದ ಹೊಗಳು ಭಟರು ಆದ ಪತ್ರಕರ್ತರು ಪುರಷ್ಕರಿಸಲ್ಪಡುತ್ತಿದ್ದಾರೆ. ಇದೇ ವೇಳೆ ವಿರೋಧದ ಧ್ವನಿ ಕೇಳುವಂತೆ ಮಾಡುತ್ತಿದ್ದ ಮೀಡಿಯ ವನ್ ಬಂದ್ ಮಾಡಲಾಯಿತು. ಫ್ಯಾಕ್ಟ್ ಚೆಕ್ ನಡೆಸಿದ ಮುಹಮ್ಮದ್ ಝುಬೈರ್ ಮೇಲೆ ಕೇಸುಗಳನ್ನು ಹೇರಿ ಬಂಧಿಸಿದ್ದು ಇವೆಲ್ಲವೂ ತುರ್ತು ಪರಿಸ್ಥಿತಿ ಅಲ್ಲದಿದ್ದರೆ ಇನ್ನೆಂಥದ್ದು.
ಹೌದು, ಐವತ್ತು ವರ್ಷಗಳ ಮೊದಲು ಭಾರತದ ಪ್ರಜಾಪ್ರಭುತ್ವ ಎದುರಿಸಿದ ಕೆಟ್ಟ ಕನಸ್ಸೇ ತುರ್ತು ಪರಿಸ್ಥಿತಿಯಾಗಿದೆ. ಆದರೆ ಅದು ಈಗ ಪರಿಪೂರ್ಣ ರೂಪದಲ್ಲಿ ನಿಜವಾಗುತ್ತಿದೆ. ರಾಜ್ಯ ಸರಕಾರಗಳ ಚಟುವಟಿಕೆಗಳನ್ನು ದಿನಾಲೂ ದಿಲ್ಲಿಯ ಅಂತಃಪುರದಲ್ಲಿ ಕೂತವರು ಉಲ್ಟಾ ಪಲ್ಟಿ ಮಾಡುತ್ತಿದ್ದಾರೆ. ಕೋಮುವಾದ ಮತ್ತು ದ್ವೇಷ, ಯುದ್ಧೋನ್ಮಾದ ಎಲ್ಲವೂ ರಾಷ್ಟ್ರೀಯತೆಯ ಗುರುತು ಘೋಷಣೆಗಳಾಗಿ ಅಂಗೀಕಾರಗೊಂಡಿದೆ. ಯುದ್ಧ ದಾಹವನ್ನು ವಿರೋಧಿಸುವುದು ಕೂಡ ಅಪರಾಧವಾಗಿ ಬಿಟ್ಟಿದೆ. ರೈತರು, ವಿದ್ಯಾರ್ಥಿಗಳು, ನಿರುದ್ಯೋಗಿಗಳ ಪ್ರತಿಭಟನೆಯನ್ನು ರಕ್ತದಲ್ಲಿ ಅದ್ದಿ ಇಲ್ಲದಾಗಿಸಿದೆ.












