ಸನ್ಮಾರ್ಗ ವಾರ್ತೆ
MRPL ಘಟಕದಲ್ಲಿ ಅನಿಲ ಸೋರಿಕೆ ಯಿಂದ ಕೂಲಿ ಕಾರ್ಮಿಕರಿಬ್ಬರ ಸಾವಿಗೆ ಕಂಪೆನಿಯನ್ನೇ ನೇರ ಹೊಣೆಯಾಗಿಸಬೇಕು ಎಂದು ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಆಗ್ರಹಿಸಿದ್ದಾರೆ.
ಈ ಮೊದಲು ಅನೇಕ ಬಾರಿ ಕಂಪೆನಿಗಳ ಬೇಜವಾಬ್ದಾರಿಯಿಂದ ಅನೇಕ ಜೀವಗಳನ್ನು ಕಳೆದುಕೊಂಡಿದ್ದೇವೆ. ಇದು ಪುನಃ ಮರುಕಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ದುಡಿಯುವ ಕಾರ್ಮಿಕರಲ್ಲಿ ಭಯದ ವಾತಾವರಣ ಉಂಟುಮಾಡಿದೆ. ಕಾರ್ಮಿಕರು ಜೀವವನ್ನು ಪಣಕ್ಕಿಟ್ಟು ಹೊಟ್ಟೆ ತುಂಬಿಸುವಂತಾಗಿದೆ ಎಂದರು.
ತಾವುಗಳು ಇವತ್ತು ಪರಿಹಾರದ ನೆಪದಲ್ಲಿ ಕಾರ್ಮಿಕರ ಕುಟುಂಬಕ್ಕೆ ಹಣಕೊಟ್ಟು ಕೈ ತೊಳೆದುಕೊಳ್ಳಬಹುದು ತಾವು ಪರಿಹಾರ ಕೊಟ್ಟ ತಕ್ಷಣ ಎಲ್ಲವೂ ಸರಿಯಾಯಿತು ಅಂದುಕೊಂಡು ತಮ್ಮ ವೈಫಲ್ಯವನ್ನು ಮುಚ್ಚಿಡುತ್ತೇವೆ ಎಂಬ ಭ್ರಮೆಯಲ್ಲಿ ಇದ್ದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಈ ಕೂಡಲೇ ಕೂಲಿ ಕಾರ್ಮಿಕರ ಕುಟುಂಬಕ್ಕೆ ಪರಿಹಾರ ಕೊಡುವ ಮೂಲಕ,ಘಟಕದಲ್ಲಿ ಕೆಲಸ ಮಾಡುವ ಸಾವಿರಾರು ಕೆಲಸಗಾರರ ಜೀವಕ್ಕೆ ಸೂಕ್ತ ಭದ್ರತೆಯನ್ನು ಕೊಡಬೇಕು. ಇನ್ನೂ ಪುನರಾವರ್ತನೆ ಆಗುವುದನ್ನು ನಾವು ಸಹಿಸುವುದಿಲ್ಲ ಎಂದು MRPL ಮತ್ತು MSEZ ನಲ್ಲಿರುವ ಕಂಪನಿಗಳಿಗೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಸಂಚಾಲಕರಾದ ಸಿರಾಜ್ ಬಜ್ಪೆ ಎಚ್ಚರಿಕೆ ನೀಡುವುದರ ಮೂಲಕ ,ಕಂಪನಿ ಎದುರುಗಡೆ ಪ್ರತಿಭಟನೆ ಮಾಡಲು ಸಿದ್ಧತೆ ಮಾಡುತ್ತಿದ್ದೇವೆ ಎಂದು ಹೇಳಿದರು .












