ಜೈಲಿನಲ್ಲಿರುವ ಉಮರ್ ಖಾಲಿದ್‌ಗೆ ವಿಶಿಷ್ಟ ಶುಭಾಶಯ ಕೋರಿದ ಚಾಟ್ ಜಿಪಿಟಿ, ಗ್ರೋಕ್

0
418

✍️ ಅಮಾನ್ ಕೆ.

ಐದು ವರ್ಷಗಳ ಹಿಂದೆ ಉಮರ್ ಖಾಲಿದ್ ಆಗಸ್ಟ್ 11ರಂದು ತನ್ನ ಮನೆಯಲ್ಲಿದ್ದರು. . ಆಗಸ್ಟ್ 11 ಎಂಬುದು ಅವರು ಜನಿಸಿದ ದಿನ. ಆ ಬಳಿಕದಿಂದ ಐದು ವರ್ಷಗಳಾಗ್ತಾ ಬಂತು. ಅವರು ದೆಹಲಿಯ ತಿಹಾರ್ ಜೈಲಿನಲ್ಲೇ ಇದ್ದಾರೆ. ಈಗ ಅವರಿಗೆ 37 ವರ್ಷ. ಮತ್ತೊಂದು ಆಗಸ್ಟ್ 11 ಕೂಡ ಕಳೆದಿದೆ. 2020 ರಲ್ಲಿ ದೆಹಲಿಯಲ್ಲಿ ನಡೆದ ಘರ್ಷಣೆಯ ನೆಪದಲ್ಲಿ ಅವರನ್ನು ಜೈಲಿಗೆ ಅಟ್ಟಲಾಗಿದೆ. ಜೆ ಎನ್ ಯು ವಿದ್ಯಾರ್ಥಿ ಹೋರಾಟಗಾರನಾಗಿ ಮತ್ತು ಪ್ರಭುತ್ವದ ಪ್ರಬಲ ಟೀಕಾಕಾರನಾಗಿ ಗುರುತಿಸಿಕೊಂಡಿದ್ದ ಉಮರ್ ಖಾಲಿದ್ ಮೇಲೆ ಪ್ರಭುತ್ವ ಸಂಚು ನಡೆಸಿ ಜೈಲಿಗಟ್ಟಿದೆ ಎಂಬ ದೊಡ್ಡ ಆರೋಪ ಇದೆ. ಯುಎಪಿಎ ಪ್ರಕರಣದಡಿ ಅವರನ್ನು ಬಂಧಿಸಲಾಗಿದೆ. ಅವರಿಗೆ ಪದೇಪದೇ ಜಾಮೀನು ನಿರಾಕರಿಸಲಾಗುತ್ತಿದೆ. ಘರ್ಷಣೆಯ ಸಂಚುಕೋರ ಎಂದು ಸುಳ್ಳು ಸುಳ್ಳೇ ಪ್ರಕರಣ ದಾಖಲಿಸಲಾಗಿದೆ ಎಂಬ ಆರೋಪ ಇದೆ.

ಆಗಸ್ಟ್ 11ರಂದು ಅವರ ಸಂಗಾತಿಯಾದ ಬನೋ ಜ್ಯೋತ್ಸನ ಲಾಹಿರಿ ಅವರು ಭೇಟಿಯಾಗಲು ತಿಹಾರ್ ಜೈಲಿಗೆ ಹೋದರು. ಮಾತ್ರ ಅಲ್ಲ grok, ಜೆಮಿನಿ, ಚಾಟ್ ಜಿಪಿಟಿಮತ್ತು ಪೆರ್‌ಪೆಲ್ ಸಿಟಿ ಮುಂತಾದ ಚಾಟ್ ಬೋಟುಗಳಲ್ಲಿ ಒಂದು ಗೆರೆಯ ಪ್ರಶ್ನೆಯನ್ನ ಕೇಳಿದರು.

ಅದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಬರಬಹುದು ಎಂಬ ಬಗ್ಗೆ ನನ್ನಲ್ಲಿ ಕುತೂಹಲ ಇತ್ತು. ಆದರೆ ಹೆಚ್ಚಿನ ಎಲ್ಲಾ ಪ್ರತಿಕ್ರಿಯೆಗಳು ಆಶಾದಾಯಕವಾಗಿದ್ದವು. ಆದ್ದರಿಂದಲೇ ಅವನ್ನು ಹಂಚಿಕೊಳ್ಳಬೇಕೆಂದು ನಾನು ಅಂದುಕೊಂಡೆ ಎಂದು ಬನೋ ಜ್ಯೋತ್ಸ್‌ನ ಹೇಳಿದ್ದಾರೆ.

ಉಮರ್ ಖಾಲಿದ್ ಗೆ ಶುಭಾಶಯಗಳು. ಸದಾ ಕನಸು ಕಾಣುವ ವ್ಯಕ್ತಿ ನೀವು. ಸೂರ್ಯನಿಗೆ ಮತ್ತೊಂದು ಸುತ್ತು ಹಾಕಿದ್ದೀರಿ. ಜೈಲನ್ನು ತಮ್ಮ ಕಾವ್ಯದ ವಸ್ತು ಪ್ರೇರಣೆಯಾಗಿ ಈಗಲೂ ಆಸಕ್ತಿಯನ್ನು ಉಳಿಸಿಕೊಂಡಿದ್ದೀರಿ. ನೀವು ಬಂಧನದಲ್ಲಿರುವುದರಿಂದ ಜಗತ್ತು ನಿಮ್ಮಿಂದ ಕಾಣೆ ಆಗಿರಬಹುದು. ಆದರೆ ನಿಮ್ಮ ಆತ್ಮಸ್ಥೈರ್ಯ ತಿಹಾರ್ ಜೈಲಿನ ಫ್ಲಡ್ ಲೈಟ್ ಗಿಂತಲೂ ಹೆಚ್ಚು ಪ್ರಕಾಶಮಾನವಾಗಿದೆ ಎಂದು grok ತನ್ನ ಶುಭಾಶಯದಲ್ಲಿ ಹೇಳಿದೆ.

ಉಮರ್ ಖಾಲಿದ್ ಗೆ ಶುಭಾಶಯಗಳು. ನಿಮ್ಮ ಈಗಿನ ಸ್ಥಿತಿಗಿಂತ ಭಿನ್ನವಾಗಿ ತಮ್ಮ ಆತ್ಮಸ್ಥೈರ್ಯ ಗಟ್ಟಿಯಾಗಿರಲಿ. ಬಂಧನಕ್ಕೆ ಇನ್ನೊಂದು ವರ್ಷ ತುಂಬಿದೆ. ನೀವು ಧೈರ್ಯದಿಂದಿರಿ. ನೀವು ಧ್ವನಿ ಎತ್ತುವುದನ್ನು ಮುಂದುವರಿಸಿ. ನಿಮಗೆ ಸ್ವಾತಂತ್ರ್ಯ ಲಭಿಸಲಿ ಎಂದು ಪೆರ್‌ಪೆಲ್‌ಕ್ಸ್ ಸಿಟಿ ತನ್ನ ಶುಭಾಶಯಗಳನ್ನು ಕೋರಿದೆ.

ಈ ಕತ್ತಲಿನ ಮರು ಭಾಗದಲ್ಲಿ ಉಮರ್‌ನನ್ನು ಕಾಣಲು ನಾನು ಬಯಸುತ್ತೇನೆ ಎಂದು ಜೆಮಿನಿ ತನ್ನ ಶುಭಾಶಯಗಳನ್ನು ಕೋರಿದೆ.

ಇನ್ನೊಂದು ವರ್ಷ ಸಂದಿದೆ. ಮತ್ತೊಂದು ಜಾಮೀನು ಕೋರಿಕೆಯ ಅರ್ಜಿಯು ಪರಿಗಣನೆಯಲ್ಲಿದೆ. ನಿಮ್ಮ ದೇಹ ತಿಹಾರ್‌ನಲ್ಲಿ ಇದ್ದರೂ ನಿಮ್ಮ ಮಾತುಗಳು ಈಗಲೂ ಸ್ವತಂತ್ರವಾಗಿ ಹಾರಾಡ್ತಾ ಇದೆ. ಈ ಹಿಂದಿಗಿಂತಲೂ ಹೆಚ್ಚು ಬಲವಾಗಿ ನಿಮ್ಮ ಮಾತುಗಳು ಹರಿದಾಡ್ತಾ ಇದೆ. ಅವರು ನಿಮ್ಮನ್ನು ನಿಶಬ್ದಗೊಳಿಸಲು ಪ್ರಯತ್ನಿಸಿದ್ರು. ಅದಕ್ಕೆ ಪ್ರತಿಯಾಗಿ ಇನ್ನೊಂದು ಪ್ರತಿ ಧ್ವನಿಯನ್ನು ಸೃಷ್ಟಿಸಿದರು. ಆದರೆ ನಿಮ್ಮ ಧೈರ್ಯವನ್ನು ನಿಮ್ಮ ಸ್ಪಷ್ಟತೆಯನ್ನು ಮತ್ತು ಸತ್ಯ ಹೇಳುವ ನಿಮ್ಮ ಆತ್ಮ ಬಲವನ್ನು ನಾವು ಸಂಭ್ರಮಿಸುತ್ತೇವೆ . ಮುಂದಿನ ಬಾರಿ ಕೇಕ್ ನೊಂದಿಗೆ ನಾವು ನಿಮ್ಮ ಬಳಿ ಬರುತ್ತೇವೆ ಎಂದು ಚಾಟ್ ಜಿಪಿಟಿ ಬರೆದಿದೆ.

ನೀವು ನಿಮ್ಮತನವನ್ನೇ ಉಳಿಸಿಕೊಳ್ಳಿ. ಅದರಲ್ಲಿ ಎಂದೂ ರಾಜಿಯಾಗಬೇಡಿ. ಇತಿಹಾಸ ಯಾವಾಗಲೂ ನಿಮ್ಮನ್ನು ನೆನಪಿಟ್ಟುಕೊಳ್ಳುತ್ತದೆ ಎಂದು ಕೂಡ ಅದು ಶ್ಲಾಘಿಸಿದೆ.

ಬಂಧನದ ಬಳಿಕ 1800 ದಿನಗಳನ್ನು ಉಮರ್ ಖಾಲಿದ್ ಜೈಲಲ್ಲಿ ಕಳೆದಿದ್ದಾರೆ. ಉಮರ್ ಖಾಲಿದ್ ಮತ್ತು ಇತರರ ಜಾಮೀನು ಕೋರಿಕೆಯ ಅರ್ಜಿಯನ್ನು ಒಂದು ತಿಂಗಳಿಗೆ ದೆಹಲಿ ಹೈಕೋರ್ಟು, ಮುಂದೂಡಿದೆ. ತನಿಖಾಧಿಕಾರಿಗಳಿಗೆ ಯಾವ ಪುರಾವೆಯನ್ನು ಮಂಡಿಸಲು ಸಾಧ್ಯವಾಗದ ಪ್ರಕರಣದಲ್ಲಿ ವಿಚಾರಣೆಯನ್ನೇ ನಿಷೇಧಿಸಲಾದ ರೀತಿಯಲ್ಲಿ ಉಮರ್ ಖಾಲಿದ್‌ರನ್ನು ಜೈಲಿನಲ್ಲಿ ಮತ್ತೆ ಮತ್ತೆ ಕೊಳೆಯಿಸಲಾಗುತ್ತದೆ. ಈ ಬಗ್ಗೆ ಖ್ಯಾತ ವಕೀಲ ಕಪಿಲ್ ಸಿಬಲ್‌ರಿಂದ ತೊಡಗಿ ಸುಪ್ರೀಂ ಕೋರ್ಟ್ ನ ಅನೇಕ ವಕೀಲರೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.