ಸನ್ಮಾರ್ಗ ವಾರ್ತೆ
ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಘೋಷಿಸಿದ್ದ ವಾರ್ಷಿಕ ಟೋಲ್ ಪಾಸ್ ಯೋಜನೆಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದೆ. ಕೇವಲ ನಾಲ್ಕು ದಿನಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಪಾಸ್ಗಳು ಮಾರಾಟವಾಗಿದ್ದು, ಸರ್ಕಾರಕ್ಕೆ ₹150 ಕೋಟಿ ಆದಾಯ ಬಂದಿದೆ.
ಮಾರಾಟದಲ್ಲಿ ತಮಿಳುನಾಡು ದೇಶದಲ್ಲೇ ಅಗ್ರಸ್ಥಾನದಲ್ಲಿದ್ದು, ಕರ್ನಾಟಕ ಮತ್ತು ಹರಿಯಾಣ ಮುಂದಿನ ಸ್ಥಾನಗಳಲ್ಲಿವೆ. ಬಳಸುವವರ ಸಂಖ್ಯೆಯಲ್ಲಿಯೂ ಈ ರಾಜ್ಯಗಳು ಮುಂಚೂಣಿಯಲ್ಲಿವೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.
₹3,000 ಮೌಲ್ಯದ ಈ ಪಾಸ್ ಒಂದು ವರ್ಷ ಅಥವಾ ಗರಿಷ್ಠ 200 ಪ್ರಯಾಣಗಳಿಗೆ ಮಾನ್ಯವಾಗಲಿದೆ. ಆಗಸ್ಟ್ 15ರಿಂದ ‘ರಾಜ್ಮಾರ್ಗ್’ ಆಪ್, ಎನ್ಎಚ್ಎಐ ವೆಬ್ಸೈಟ್ ಮತ್ತು ಸಾರಿಗೆ ಇಲಾಖೆಯ ವೆಬ್ಸೈಟ್ ಮೂಲಕ ಖರೀದಿಸಬಹುದು. ಫಾಸ್ಟ್ಟ್ಯಾಗ್ ಹೊಂದಿರುವವರಿಗೆ ಹೊಸ ಪಾಸ್ ಅಗತ್ಯವಿಲ್ಲ.
ಸುಗಮ ಸಂಚಾರಕ್ಕಾಗಿ ಪ್ರತಿ ಟೋಲ್ ಪ್ಲಾಜಾದಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಫಾಸ್ಟ್ಟ್ಯಾಗ್ ಸಂಬಂಧಿಸಿದ ದೂರುಗಳಿಗೆ ಟೋಲ್ಫ್ರೀ ಸಂಖ್ಯೆ 1033 ಮೂಲಕ ಸಂಪರ್ಕಿಸಬಹುದು ಎಂದು ಎನ್ಎಚ್ಎಐ ತಿಳಿಸಿದೆ.












