ಸನ್ಮಾರ್ಗ ವಾರ್ತೆ
ವರದಕ್ಷಿಣೆಗಾಗಿ ಉತ್ತರ ಪ್ರದೇಶದಲ್ಲಿ ಭೀಕರ ಹತ್ಯೆ ನಡೆದಿದೆ. ಆಗಸ್ಟ್ 21ರಂದು ಈ ಹತ್ಯೆ ನಡೆದಿದ್ದು 28 ವರ್ಷದ ನಿಕ್ಕಿ ಭಾಟಿಯಾ ಹತ್ಯೆಗೀಡಾದವರಾಗಿದ್ದಾರೆ. ಈಕೆಯನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ. ಪತಿ ಮತ್ತು ಅತ್ತೆ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಗೊತ್ತಾಗಿದ್ದು ಅವರಿಬ್ಬರನ್ನು ಬಂಧಿಸಲಾಗಿದೆ. ನಿಕ್ಕಿ ಬಾಟಿಯಾಗೆ ಬೆಂಕಿ ಕೊಟ್ಟು ಆ ಬಳಿಕ ಮನೆಯಿಂದ ಹೊರಗೆ ದೂಡಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ.
ಅವರು ನನ್ನ ತಾಯಿಯ ದೇಹಕ್ಕೆ ಏನೋ ಸುರಿದರು. ಥಳಿಸಿದ್ರು. ಬಳಿಕ ಲೈಟರ್ ಉಪಯೋಗಿಸಿ ಬೆಂಕಿ ಕೊಟ್ಟರು ಎಂದು ನಿಖಿ ಬಾಟಿಯಾಳ ಆರು ವರ್ಷದ ಮಗು ಸಾಕ್ಷ ಹೇಳಿರುವುದು ಘಟನೆಯ ಭೀಕರತೆಯನ್ನು ಹೇಳುತ್ತದೆ.
ಆರು ತಿಂಗಳ ಹಿಂದೆ ಈಕೆ ತನ್ನ ತವರು ಮನೆಗೆ ಹೋಗಿದ್ದಳು. ಪತಿ ಮತ್ತು ಕುಟುಂಬದವರು ತನ್ನ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ಪರಿಗಣಿಸಿ ಆಕೆ ಹೀಗೆ ಹೊರಟು ಹೋಗಿದ್ದಳು. ಆ ಬಳಿಕ ಪತಿ ವಿಪಿನ್ ಆಕೆಯ ಮನೆಗೆ ಬಂದು ಕ್ಷಮೆ ಕೋರಿದ್ದ. ಮನೆಗೆ ಮರಳಿ ಬರಬೇಕೆಂದು ವಿನಂತಿಸಿದ್ದ. ಇನ್ನು ಮುಂದೆ ತಾನು ಈ ಹಿಂದಿನ ಕೃತ್ಯವನ್ನು ಪುನರಾವರ್ತಿಸಲಾರೆ ಎಂದು ಪ್ರತಿಜ್ಞೆ ಮಾಡಿದ್ದ. ಪ್ರತಿಜ್ಞೆಯನ್ನು ಅನುಸರಿಸಿ ಆಕೆ ಮರಳಿ ತನ್ನ ಪತಿಯ ಮನೆಗೆ ಹೋಗಿದ್ದಳು. ಆದರೆ ದೌರ್ಜನ್ಯದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.
ಈ ನಿಕಿ ಭಾಟಿಯಾಳ ಪತಿಯ ತಮ್ಮನನ್ನು ಈಕೆಯ ತಂಗಿ ಕಾಂಚನ್ ವಿವಾಹವಾಗಿದ್ದಳು. ನಿಖಿ ಮತ್ತು ಕಾಂಚನ್ ಜೊತೆ ಸೇರಿ ಬ್ಯೂಟಿ ಪಾರ್ಲರ್ ಆರಂಭಿಸಿದ್ದರು. ಆದರೆ ಇದು ವಿಪಿನ್ ಮತ್ತು ಆತನ ಕುಟುಂಬಕ್ಕೆ ಇಷ್ಟವಾಗಿರಲಿಲ್ಲ. ಈಕೆ ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದಳು . ಆದರೆ ವಿಪಿನ್ಗೆ ಇಷ್ಟ ಇಲ್ಲ ಎಂದು ಅದರಿಂದಲೂ ದೂರ ನಿಂತಳು.
ಮದುವೆಯಾಗುವಾಗ ದುಬಾರಿ ವರದಕ್ಷಿಣೆಯನ್ನು ಈಕೆ ನೀಡಿದ್ದಳು. ಸ್ಕಾರ್ಪಿಯೋ ಎಸ್ ಯು ವಿ, ರೋಯಲ್ ಎನ್ ಫೀಲ್ಡ್ ಬೈಕ್, ಬಂಗಾರ ಹಣ ಇತ್ಯಾದಿ ಭಾರಿ ಪ್ರಮಾಣದಲ್ಲಿ ವರದಕ್ಷಿಣೆಯನ್ನು ನೀಡಿದ್ದಳು . ಆದರೆ ವಿಪಿನ್ ಮತ್ತು ಆತನ ಮನೆಯವರು ಮತ್ತಷ್ಟು ವರದಕ್ಷಿಣ ತರುವಂತೆ ಕಿರುಕುಳ ನೀಡುತ್ತಿದ್ದರು. ಆಗಸ್ಟ್ 21ರಂದು ಮಾತಿಗೆ ಮಾತು ಬೆಳೆದು ವಿಪಿನ್ ಮತ್ತು ಆತನ ತಾಯಿ ನಿಖಿ ಜೊತೆ ಸೇರಿ ನಿಕ್ಕಿ ಭಾಟಿಯಾಗೆ ಬೆಂಕಿ ಹಚ್ಚಿದರು. ಆರು ವರ್ಷದ ಮಗ ಮತ್ತು ಸಹೋದರಿಯ ಎದುರೇ ಈ ಕ್ರೌರ್ಯ ಎಸಗಿದ್ದರು.
ತಾನು ಇಂತದ್ದೊಂದು ಕ್ರೌರ್ಯವನ್ನು ನಿರೀಕ್ಷಿಸಿರಲಿಲ್ಲ. ಮಗನಿಗಾಗಿ ಅಕ್ಕ ಎಲ್ಲವನ್ನು ಸಹಿಸಿದಳು. ಆದರೆ ಅಂತಿಮವಾಗಿ ಆಕೆಯನ್ನೇ ಹತ್ಯೆ ಮಾಡಿದ್ರು ಎಂದು ತಂಗಿ ಕಾಂಚನ ಹೇಳಿದ್ದಾರೆ. ವಿಪಿನ್, ಆತನ ಅಮ್ಮ ದಯ ವಿಪಿನ್ ತಂದೆ ಸತ್ಯವೀರ್ ಮತ್ತು ಸಹೋದರ ರೋಹಿತ್ ನ ವಿರುದ್ಧ ಆಕೆ ಕೇಸು ದಾಖಲಿಸಿದ್ದಾಳೆ. ಎಲ್ಲರನ್ನೂ ಬಂಧಿಸಲಾಗಿದೆ.












