ಸನ್ಮಾರ್ಗ ವಾರ್ತೆ
ಕಾನೂನುಬಾಹಿರವಾಗಿ ವಾಸಿಸುತ್ತಿರುವವರನ್ನು ಒಕ್ಕಲೆಬ್ಬಿಸುತ್ತಿರುವ ತನ್ನ ಕಾರ್ಯಾಚರಣೆಯನ್ನು ಕಾಂಗ್ರೆಸ್, ಜಮಾಅತೆ ಇಸ್ಲಾಮಿ ಹಿಂದ್ ಮತ್ತು ಹರ್ಷ ಮಂದರ್, ಪ್ರಶಾಂತ್ ಭೂಷಣ್ ಮುಂತಾದವರು ವಿರೋಧಿಸುತ್ತಿದ್ದಾರೆ ಮತ್ತು ಸರ್ಕಾರದ ವಿರುದ್ಧ ಆರೋಪವನ್ನು ಹೊರಿಸುತ್ತಿದ್ದಾರೆ ಎಂದು ಅಸ್ಸಾಂನ ಮುಖ್ಯಮಂತ್ರಿ . ಹಿಮಂತ್ ಬಿಸ್ವ ಶರ್ಮ ಆಪಾದಿಸಿದ್ದಾರೆ. ಇವರ ಜೊತೆಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಶಕ್ತಿಗಳು ಸೇರಿಕೊಂಡಿವೆ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಅಶಾಂತಿಯನ್ನು ಹುಟ್ಟಿಸಬೇಕು ಎಂಬ ಉದ್ದೇಶದಿಂದಲೇ ಕೆಲವರು ಅಸ್ಸಾಂಗೆ ಬರ್ತಾ ಇದ್ದಾರೆ ಎಂದು ಹರ್ಷ ಮಂದರ್ ಮತ್ತು ಪ್ರಶಾಂತ್ ಭೂಷಣ್ ಅವರ ಅಸ್ಸಾಮ್ ಭೇಟಿಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಟೀಕಿಸಿದ್ದಾರೆ.
ಅಸ್ಸಾಂನ ಶಾಂತಿಯನ್ನು ಕದಡುವುದಕ್ಕಾಗಿ ಕೆಲವರು ಭೇಟಿ ಕೊಡ್ತಾ ಇದ್ದಾರೆ. ಹರ್ಷ ಮಂದರ್ ಮತ್ತು ಪ್ರಶಾಂತ್ ಭೂಷನ್ ಅವರು ಎಲ್ಲೆಡೆ ಪ್ರಯಾಣಿಸುತ್ತಿದ್ದಾರೆ. ಇನ್ನೊಂದೆಡೆ ಜವಾಹರ್ ಸಿರ್ಕಾರ್, ವಜಾಹತ್ ಹಬೀಬುಲ್ಲ ಮತ್ತು ಫಯಾಜ್ ಶಾಹಿದ್ ಮುಂತಾದವರ ತಂಡವು ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯರ ಸಹಿತ ವಿವಿಧ ಅಲ್ಪಸಂಖ್ಯಾತ ನಾಯಕರ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಅವರು ಆಪಾದಿಸಿದ್ದಾರೆ.
ಮುಖ್ಯಮಂತ್ರಿ ಪದವಿಯಿಂದ ತನ್ನನ್ನು ತೆರವುಗೊಳಿಸಬೇಕು ಎಂದು ನಿನ್ನೆ ಜಮಾಅತೆ ಇಸ್ಲಾಮಿ ಹಿಂದ್ ಆಗ್ರಹಿಸಿದೆ. ಇನ್ನೊಂದಡೆ ಹರ್ಷ ಮಂದರ್ ವಜಾ ಹತ್ ಹಬೀಬುಲ್ಲ ಫಯಾಜ್ ಶಾಹಿದ್, ಪ್ರಶಾಂತ ಭೂಷಣ್ ಮುಂತಾದವರು ಅಸ್ಸಾಂನಲ್ಲಿ ಇದ್ದಾರೆ. ಕಾನೂನುಬಾಹಿರವಾಗಿ ನೆಲೆಸಿದವರನ್ನು ತೆರುವುಗೊಳಿಸುವ ನಮ್ಮ ಕಾರ್ಯಾಚರಣೆಯನ್ನು ಅಪರಾಧಿಗೊಳಿಸುವುದೇ ಇವರ ಉದ್ದೇಶ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಬರ ಕೊಂಡಿದ್ದಾರೆ.
ಎನ್ ಆರ್ ಸಿ ಯ ವಿರುದ್ಧ ಹೋರಾಟ ಮಾಡಿ ಅವರು ಜಯಗಳಿಸಿದ್ರು. ಆದರೆ ಈ ಬಾರಿ ಅವರು ಯಶಸ್ಸು ಗಳಿಸಲು ತಾನು ಬಿಡಲ್ಲ ಎಂದು ಕೂಡ ಅವರು ಬರೆದಿದ್ದಾರೆ.












