ನಿರಾಯುಧೀಕರಣ ಸಾಧ್ಯವಿಲ್ಲ: ಹಿಸ್ಬುಲ್ಲ

0
359

ಸನ್ಮಾರ್ಗ ವಾರ್ತೆ

ಪತ್ರಕರ್ತರನ್ನು ಟಾರ್ಗೆಟ್ ಮಾಡುವುದನ್ನು ಇಸ್ರೇಲ್ ಮುಂದುವರಿಸಿದೆ. ಗಾಝಾ ದ ಖಾನ್ ಯೂನಿಸ್ ನಲ್ಲಿರುವ ಅಲ್ ನಾಸರ್ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ಇಸ್ರೇಲ್ ಐವರು ಪತ್ರಕರ್ತರು ಸೇರಿದಂತೆ ಇಪ್ಪತ್ತು ಮಂದಿಯ ಹತ್ಯೆ ನಡೆಸಿದೆ. ರಾಯಿಟರ್ಸ್ ನ್ಯೂಸ್ ಏಜೆನ್ಸಿಯ ಫೋಟೋ ಜರ್ನಲ್ ಲಿಸ್ಟ್ ಹುಸ್ಸಾಮ್ ಅಲ್ ಮಸ್ರಿ, ಅಲ್ ಜಝೀರ ಫೋಟೋ ಜರ್ನಲ್ ಲಿಸ್ಟ್ ಮುಹಮ್ಮದ್ ಸಲಾಂ, ಅಸೋಸಿಯೇಟೆಡ್ ಪ್ರೆಸ್ ಸಹಿತ ವಿವಿಧ ಮಾಧ್ಯಮಗಳಿಗೆ ಸುದ್ದಿ ನೀಡುತ್ತಿದ್ದ ಮರಿಯಂ ಅಬೂ ದಖ, ಎನ್‌ಬಿಸಿ ನೆಟ್ವರ್ಕ್ ಜರ್ನಲಿಸ್ಟ್ ಮುಆಸ್ ಅಬೂ ತಾಹಾ, ಖುದ್ಸ್ ಫೀಡ್ ರಿಪೋರ್ಟರ್ ಅಬು ಅಜೀಸ್ ಅಬೂ ಅಝೀಝ್ ಮುಂತಾದ ಪತ್ರಕರ್ತರು ಹತ್ಯೆಗೀಡಾಗಿದ್ದಾರೆ.

ಮೊಹಮ್ಮದ್ ಸಲಾಂ ಅವರು ಫೆಲೆಸ್ತೀನಿ ನ ಜರ್ನಲಿಸ್ಟ್ ಹಾಲ ಅಸ್ಪೂರ ಅವರನ್ನು ಕಳೆದ ವರ್ಷ ಯುದ್ಧದ ಸಂದರ್ಭದಲ್ಲಿ ವಿವಾಹವಾಗಿದ್ದರು. ಗಾಝಾದ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ ಮತ್ತು ಇನ್ನಿತರ ಸಮಸ್ಯೆಗಳನ್ನು ವರದಿ ಮಾಡುವುದಕ್ಕಾಗಿ ಅವರು ಆಸ್ಪತ್ರೆಗೆ ಬಂದಿದ್ದರು.

ಆಸ್ಪತ್ರೆಯ ಮೇಲೆ ಇಸ್ರೇಲ್ ಬಾಂಬುದಾಳಿ ನಡೆಸಿದೆ. ಈ ಬಾಂಬ್ ದಾಳಿಯ ಸುದ್ದಿಯನ್ನು ಕೇಳಿ ಪತ್ರಕರ್ತರು ಮತ್ತು ಇನ್ನಿತರ ಆರೋಗ್ಯ ಕಾರ್ಯಕರ್ತರು ಅಲ್ಲಿಗೆ ಧಾವಿಸಿದ್ದಾರೆ. ಆ ಬಳಿಕ ಮತ್ತೊಮ್ಮೆ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ.

ಇದೇ ಆಸ್ಪತ್ರೆಯ ಮೇಲೆ ಈ ಮೊದಲೂ ಇಸ್ರೇಲ್ ಬಾಂಬ್ ದಾಳಿ ನಡೆಸಿತ್ತು. ಯುದ್ಧ ಆರಂಭವಾದ ಬಳಿಕ ಈವರೆಗೆ 274 ಮಂದಿ ಪತ್ರಕರ್ತರನ್ನು ಇಸ್ರೇಲ್ ಹತ್ಯೆ ಮಾಡಿದೆ.

ಇದೇ ವೇಳೆ ಕಳೆದು 24 ಗಂಟೆಗಳಲ್ಲಿ ಗಾಝದಲ್ಲಿ ಹಸಿವಿನಿಂದ ಇಬ್ಬರು ಮಕ್ಕಳು ಸಹಿತ 11 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಹಸಿವಿನಿಂದ 300 ಮಂದಿ ಸಾವಿಗೀಡಾದಂತಾಗಿದೆ. ಇದರಲ್ಲಿ 117 ಮಂದಿ ಮಕ್ಕಳು..

ಯುದ್ಧದಲ್ಲಿ 62,622 ಫೆಲೆಸ್ತೀನಿಯರು ಹತ್ಯೆಗೀಡಾಗಿದ್ದಾರೆ. 1,57673 ಮಂದಿ ಗಾಯಗೊಂಡಿದ್ದಾರೆ.

ಇದೇ ವೇಳೆ ಹಿಸ್ಬುಲ್ಲಾವನ್ನು ನಿರಾಯುಧ ಗೊಳಿಸುವುದಾದರೆ ಲೆಬನಾನ್ ನಿಂದ ತನ್ನ ಸೈನ್ಯವನ್ನು ಪೂರ್ಣವಾಗಿ ಹಿಂತೆಗೆಯುವುದಾಗಿ ಇಸ್ರೇಲ್ ಹೇಳಿದೆ. ಈ ವರ್ಷದ ಕೊನೆಯ ವೇಳೆ ಹಿಸ್ಬುಲ್ಲಾವನ್ನು ಸಂಪೂರ್ಣವಾಗಿ ನಿರಾಯುಧ ಗೊಳಿಸುವುದಾಗಿ ಲೆಬನಾನ್ ಸರಕಾರ ದಿನದ ಹಿಂದೆ ಹೇಳಿತ್ತು. ಆದರೆ ಇಸ್ರೇಲ್ ನ ಒತ್ತಡದಿಂದಾಗಿ ಲಬನಾನ್ ಸರಕಾರ ಹೀಗೆ ಘೋಷಿಸಿದೆಯೇ ಹೊರತು ಹಿಸ್ಬುಲ್ಲ ಎಂದೂ ನಿರಾಯುಧೀಕರಣಕ್ಕೆ ಒಪ್ಪುವುದಿಲ್ಲ ಎಂದು ಹಿಸ್ಬುಲ್ಲ ಹೇಳಿದೆ.