ಸನ್ಮಾರ್ಗ ವಾರ್ತೆ
ಅನುಗ್ರಹ ಮಹಿಳಾ ಪದವಿ ಕಾಲೇಜು ಕಲ್ಲಡ್ಕ ಇದರ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ನೇರ ಚುನಾವಣೆಯ ಮೂಲಕ ಆಯ್ಕೆ ಮಾಡಿದರು.
ಆಗಸ್ಟ್ 25ರಂದು ಸೋಮವಾರ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅನುಗ್ರಹ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತಾ B. D. ಇವರು ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಬ್ಯಾಡ್ಜ್ ವಿತರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಮ್ಮ ನಾಯಕತ್ವದ ಅವಧಿಯಲ್ಲಿ ಶಿಸ್ತು, ಸಂಯಮ, ಪಾರದರ್ಶಕತೆ, ನ್ಯಾಯ ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಕಾಲೇಜಿನ ಪ್ರತಿಯೊಂದು ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾ ಕಾಲೇಜಿನ ಘನತೆ ಗೌರವವನ್ನು ಹೆಚ್ಚಿಸಬೇಕೆಂದು ತಿಳಿ ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅನುಗ್ರಹ ಸಲಹಾ ಸಮಿತಿಯ ಕಾರ್ಯದರ್ಶಿಯಾದ ಶ್ರೀಮತಿ ತಾರಾಕ್ಷಿ, ಪದವಿಪೂರ್ವ ವಿಭಾಗದ ಸಂಯೋಜಕಿಯಾದ ಶ್ರೀಮತಿ ಮಮಿತಾ ಎಸ್ ರೈ, ಪದವಿ ವಿಭಾಗದ ಸಂಯೋಜಕಿಯಾದ ಶ್ರೀಮತಿ ಆಬಿದಾ. ಬಿ, ಸಲಹಾ ಸಮಿತಿಯ ಸದಸ್ಯರಾದ ಶ್ರೀಮತಿ ನವ್ಯ, ಶ್ರೀಮತಿ ಶಫಿಕಾ ಮತ್ತು ಚುನಾವಣಾ ಸಾಕ್ಷರತಾ ಸಂಘದ ಮುಖ್ಯಸ್ಥೆಯಾದ ಶ್ರೀಮತಿ ಗ್ಲೋರಿಯ ದಿವ್ಯ ಲೋಬೊ ವಿದ್ಯಾರ್ಥಿ ನಾಯಕಿಯರಿಗೆ ಬ್ಯಾಡ್ಜ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಭೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರಥಮ ಬಿಕಾಂ ವಿದ್ಯಾರ್ಥಿನಿಯಾದ ಕುಮಾರಿ ಬಸ್ರ ಬಾನು ಕಿರಾಅತ್ ಪಠಿಸಿದರು. ದ್ವಿತೀಯ ಬಿಎ ವಿಭಾಗದ ವಿದ್ಯಾರ್ಥಿನಿಯಾದ ಕುಮಾರಿ ಶಮ ಶಹರಿನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ತೃತೀಯ ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಕುಮಾರಿ ಮಹಶುಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದಿಸಿ, ತೃತೀಯ ಬಿಕಾಂ ವಿಭಾಗದ ವಿದ್ಯಾರ್ಥಿನಿ ಕುಮಾರಿ ಮಶೀದ ಕಾರ್ಯಕ್ರಮವನ್ನು ನಿರೂಪಿಸಿದರು.
ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು
ಅಧ್ಯಕ್ಷೆ : ಕುಮಾರಿ ಮಹಶುಕ (ತೃತೀಯ ಬಿಕಾಂ )
ಕಾರ್ಯದರ್ಶಿ: ಕುಮಾರಿ ಸಾರಾ ಶಹಮಾ (ತೃತೀಯ ಬಿಎ)
ಶಿಸ್ತು ಮಂತ್ರಿ: ಕುಮಾರಿ ಜಸೀನ ಬಾನು (ತೃತೀಯ ಬಿಕಾಂ)
ಸಾಂಸ್ಕೃತಿಕ ಮಂತ್ರಿ: ಕುಮಾರಿ ಫಾತಿಮಾತ್ ರಫೀಯ (ತೃತೀಯ ಬಿಕಾಂ)
ಆರೋಗ್ಯ ಮಂತ್ರಿ: ಕುಮಾರಿ ನುಸೈಬ ಬಾನು (ತೃತೀಯ ಬಿಕಾಂ)
ಕ್ರೀಡಾ ಮಂತ್ರಿ: ಕುಮಾರಿ ಆಯಿಷಾತ್ ಅನ್ಸಿಫಾ (ತೃತೀಯ ಬಿಕಾಂ)
ಸಾಹಿತ್ಯ ಸಮಾಜ: ಕುಮಾರಿ ಫಾತಿಮತ್ ಜುಮೈಲಾ (ತೃತೀಯ ಬಿ.ಎ)
ತರಗತಿ ಪ್ರತಿನಿಧಿಗಳು
ಕುಮಾರಿ ಅವ್ವಮ್ಮ ಅಪ್ರ – ಪ್ರಥಮ ಬಿಎ
ಕುಮಾರಿ ಸಾಹಲ ಫಾತಿಮಾ – ಪ್ರಥಮ ಬಿಕಾಂ
ಕುಮಾರಿ ಜಾಸ್ಮಿನ್ – ಪ್ರಥಮ ಬಿಸಿಎ
ಕುಮಾರಿ ಸಫ್ರೀನ ಬಾನು – ದ್ವಿತೀಯ ಬಿಎ
ಕುಮಾರಿ ಫಾತಿಮ ಲೆಫಮ – ದ್ವಿತೀಯ ಬಿಕಾಂ












