ಸನ್ಮಾರ್ಗ ವಾರ್ತೆ
ಮಂಗಳೂರು: ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ಕುದ್ರೋಳಿ ಜಾಮಿಯಾ ಮಸೀದಿ ಎದುಗಡೆಯಿರುವ ಫಾತಿಮಾ ಇಸ್ಲಾಮಿಕ್ ಸೆಂಟರ್ ನಲ್ಲಿ ಜರುಗಿತು.
2024-25 ಸಾಲಿನಲ SSLC ಮತ್ತು ದ್ವಿತೀಯ PUC ಪರೀಕ್ಷೆಯಲ್ಲಿ ಶೇಕಡ 90% ಅಂಕಗಳಿಸಿದ ಹಾಗೂ ಕುರ್ ಆನ್ ಕಂಠ ಪಾಠ ಮಾಡಿ ಹಾಫಿಳ್ ಆದಕುದ್ರೋಳಿ ಪರಿಸರದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಜನಾಬ್ ಯಾಸೀನ್ ಕುದ್ರೋಳಿ ವಹಿಸಿದ್ದರು.
ಕಾರ್ಯಕ್ರಮವು ಕಿರಾಅತ್ ನೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜನಾಬ್ ಅಬ್ದುಲ್ ಲತೀಫ್ ಅಲಿಯಾ ರವರು ಭಾಗವಹಿಸಿ ವಿದ್ಯಾರ್ಥಿಗಳು ಜೀವನದಲ್ಲಿ ತಮ್ಮ ಆಗುಹೋಗುಗಳ ಬಗ್ಗೆ ಗಮನ ಹರಿಸುವಂತೆ ಕಿವಿ ಮಾತನ್ನು ಹೇಳಿ ಸನ್ಮಾನಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಉದ್ಯಮಿ ಆಸೀಮ್ ಸಾಬ್, ಮಾಜಿ ಮೇಯರ್ ಕೆ.ಅಶ್ರಫ್ ಹಾಜಿ ಶಂಸುದ್ದೀನ್ ಕುದ್ರೋಳಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ಸದಸ್ಯರುಗಳಾದ ಮಕ್ಬುಲ್ ಅಹ್ಮದ್ ಜಾಮಿಯಾ, ಅಬ್ದುಲ್ ಖಲೀಲ್ ಜಾಮಿಯಾ, ಮುಝೈರ್ ಕುದ್ರೋಳಿ, ಇಸ್ಮಾಯಿಲ್ ಬಿ ಎ, ವಹಾಬ್ ಕುದ್ರೋಳಿ, NK ಅಬೂಬಕ್ಕರ್, ಮುಸ್ತಾಕ್ ಅಹ್ಮದ್, ಕೆ.ಕೆ ಲತೀಫ್, ಲತೀಫ್ ಕ್ರಿಸ್ಟಲ್, ಅಶ್ರಫ್ ಮಾಸ್, ಉಪಸ್ಥಿತರಿದ್ದರು.












