ಕುದ್ರೋಳಿ HRS ವತಿಯಿಂದ ರಕ್ತದಾನ ಶಿಬಿರ

0
330

ಸನ್ಮಾರ್ಗ ವಾರ್ತೆ

ಮಂಗಳೂರು: ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ(HRS) ವತಿಯಿಂದ ಕೆ.ಎಂ.ಸಿ ಆಸ್ಪತ್ರೆ ಹಾಗೂ ಬ್ಲಡ್ ಹೆಲ್ಪ್ ಕೇರ್ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಕುದ್ರೋಳಿ ಜಾಮಿಯಾ ಮಸೀದಿ ಎದುಗಡೆಯಿರುವ ಫಾತಿಮಾ ಇಸ್ಲಾಮಿಕ್ ಸೆಂಟರ್ ನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.

ಮುಖ್ಯ ಅತಿಥಗಳಾಗಿ ಆಗಮಿಸಿದ ಸ್ಥಳೀಯ ಕಾರ್ಪೊರೇಟರ್ ಶಂಸುದ್ದೀನ್ HBT ಉದ್ಘಾಟನಾ ಭಾಷಣ ಮಾಡಿದರು. ಕೆ.ಎಂ.ಸಿ.ಆಸ್ಪತ್ರೆಯ ಡಾ.ಅಭಿಷೇಕ್ ರಕ್ತದಾನದ ಮಹತ್ವವನ್ನು ವಿವರಿಸಿದರು. ಸಾದ್ ಕಾಂಟ್ರಾಕ್ಟಿಂಗ್ ಮಾಲಕರಾದ ಶರೀಫ್ ಸಾದ್, ನಝೀರ್ ಬ್ಲಡ್ ಹೆಲ್ಪ್ ಕೇರ್, ಜಮಾಅತೆ ಇಸ್ಲಾಮೀ ಹಿಂದ್ ಕುದ್ರೋಳಿ ಸಂಚಾಲಕರಾದ ಅಬ್ದುಲ್ ಲತೀಫ್ ಕೆ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ರಕ್ತದಾನ ಮಾಡಿದರು.

ಆರಂಭದಲ್ಲಿ ಆಸಿಮ್ ಕಿರಾಅತ್ ವಾಚಿಸಿದರು. ಇಬ್ರಾಹೀಮ್ ನಾದಿರ್ ನಿರೂಪಿಸಿ, ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.