ಇಸ್ರೇಲ್: 20,000 ಸೈನಿಕರಲ್ಲಿ ಮಾನಸಿಕ ಸಮಸ್ಯೆ

0
1281

ಸನ್ಮಾರ್ಗ ವಾರ್ತೆ

2023 ಅಕ್ಟೋಬರ್ 7ರ ಬಳಿಕ ಈವರೆಗೆ ಇಪ್ಪತ್ತು ಸಾವಿರ ಇಸ್ರೇಲ್ ಸೈನಿಕರು ವೈದ್ಯ ಚಿಕಿತ್ಸೆಯನ್ನು ಪಡೆದಿದ್ದು ಇವರಲ್ಲಿ ಅರ್ಧದಷ್ಟು ಮಂದಿ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿ ವೈದ್ಯರನ್ನು ಸಂಪರ್ಕಿಸಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ತಿಳಿಸಿದೆ. ರಕ್ಷಣಾ ಸಚಿವಾಲಯದ ಲೆಕ್ಕ ಪ್ರಕಾರ ಪುನಶ್ಚೇತನ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿರುವ 56 ಶೇಕಡ ಮಂದಿ ಕೂಡ ಪೋಸ್ಟ್ ಟ್ರೊಮಾಟಿಕ್ ಸ್ಟ್ರೆಸ್ ಡಿಸ್ಆರ್ಡರ್ ಮತ್ತು ಇನ್ನಿತರ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. 20 ಶೇಕಡ ಮಂದಿ ದೈಹಿಕ ಗಾಯಗಳ ಜೊತೆಗೆ ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿದ್ದು, ಒಟ್ಟು 20,000 ಸೈನಿಕರಲ್ಲಿ 45 ಶೇಕಡಾ ಮಂದಿ ದೈಹಿಕ ಗಾಯಗಳಿಂದ ಬಳಲುತ್ತಿದ್ದಾರೆ. ಗಾಯಗೊಂಡವರಲ್ಲಿ ಒಂಬತ್ತು ಶೇಕಡಾ ಮಂದಿಗೆ ಸಣ್ಣ ಅಥವಾ ಗಂಭೀರ ಗಾಯಗಳಾಗಿವೆ.

ಪ್ರತಿ ತಿಂಗಳು ಸುಮಾರು ಸಾವಿರದಷ್ಟು ಸೈನಿಕರು ಗಾಯಗೊಂಡು ಪುನಶ್ಚೇತನ ಶಿಬಿರಕ್ಕೆ ಬರುತ್ತಿದ್ದಾರೆ. ಅವರಿಗೆ ಅಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಈ ಹಿಂದಿನ ಘರ್ಷಣೆ ಮತ್ತು ಯುದ್ಧಗಳು ಸೇರಿ ಪುನಶ್ಚೇತನ ಶಿಬಿರದಲ್ಲಿ 82,000 ಸೈನಿಕರಿದ್ದಾರೆ. ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇವರಲ್ಲಿ 31 ಸಾವಿರ ಸೈನಿಕರು ಅಥವಾ 38 ಶೇಕಡಾ ಸೈನಿಕರಿಗೆ ಮಾನಸಿಕ ಸಮಸ್ಯೆ ಇದೆ.