ಏಳು ವರ್ಷದ ಬಾಲಕನನ್ನು ತರಗತಿಯಿಂದ ಎತ್ತಿ ಹೊರಕ್ಕೆ ಎಸೆದ ಪ್ರಾಂಶುಪಾಲ

0
858

ಸನ್ಮಾರ್ಗ ವಾರ್ತೆ

ಏಳು ವರ್ಷದ ಮುಸ್ಲಿಂ ಬಾಲಕನಿಗೆ ಉತ್ತರಖಂಡದ ಜಬರೇರ ಎಂಬ ಪ್ರದೇಶದಲ್ಲಿ ಶಾಲಾ ಪ್ರಿನ್ಸಿಪಾಲ್ ಮತ್ತು ಟೀಚರ್ ತೀವ್ರವಾಗಿ ಥಳಿಸಿರುವುದು ವರದಿಯಾಗಿದೆ. ಒಂದೇ ಒಂದು ದಿನ ಶಾಲೆಗೆ ತಪ್ಪಿಸಿರುವುದಕ್ಕಾಗಿ ಈ ಕ್ರೂರ ಶಿಕ್ಷೆಯನ್ನು ನೀಡಲಾಗಿದೆ ಶಾಲೆಯ ಪ್ರಿನ್ಸಿಪಾಲ್ ರವೀಂದ್ರ ಅವರು ಹುಡುಗನನ್ನು ತರಗತಿಯಿಂದ ಹೊರಕ್ಕೆ ಎಸೆದಿದ್ದಾರೆ ತನ್ನ ಶೂವನ್ನು ಬಾಲಕನ ಮುಖಕ್ಕೆ ಒತ್ತಿ ಹಿಡಿದಿದ್ದಾರೆ. ಶಾಲಾ ಟೀಚರ್ ರಾಕೇಶ್ ಸೈನಿ ಅವರು ಬೆತ್ತದಿಂದ ಥಳಿಸಿದ್ದಾರೆ. ಇದರಿಂದಾಗಿ ಬಾಲಕನ ಕೈ ಮುರಿದಿದೆ. ಬಾಲಕನ ತಂದೆ ದೂರು ನೀಡಿದ್ದಾರೆ.

ಇಲ್ಲಿಂದ ಹೋಗು ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಶಿಕ್ಷಕರು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಾಂಶುಪಾಲರು ಮತ್ತು ಟೀಚರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇವರಿಬ್ಬರನ್ನು ಸಸ್ಪೆಂಡ್ ಮಾಡಿದರೆ ಸಾಲದು ಕೆಲಸದಿಂದಲೇ ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದೇ ವೇಳೆ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಗಳು ಕೂಡ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಲಾಗಿದೆ. ಮಗುವಿನ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾನವ ಹಕ್ಕು ಕಾರ್ಯಕರ್ತರು ಉತ್ತರಾ ಖಂಡ ಸರಕಾರವನ್ನು ಆಗ್ರಹಿಸಿದ್ದಾರೆ.