ಪಾಕಿಸ್ತಾನದೊಂದಿಗೆ ಚರ್ಚಿಸಿಲ್ಲ, ಶಿಷ್ಠಾಚಾರವನ್ನು ಪಾಲಿಸಿದ್ದೇವೆ: ಭಾರತ

0
844

ಹೊಸದಿಲ್ಲಿ, ಜೂ. 21: ಭಾರತ ಮತ್ತು ಪಾಕಿಸ್ತಾನ ಚರ್ಚೆಗೆ ಸಿದ್ಧತೆಯನ್ನು ನಡೆಸಿದೆ ಎಂಬ ಪಾಕಿಸ್ತಾನದ ಮಾಧ್ಯಮಗಳ ವರದಿಯನ್ನು ಭಾರತ ತಳ್ಳಿಹಾಕಿದೆ. ಪ್ರಧಾನಿ ನರೇಂದ್ರ ಮೋದಿ, ವಿದೇಶ ಸಚಿವ ಎಸ್. ಜಯಶಂಕರ್ ಇಂತಹ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ವಿದೇಶ ವಕ್ತಾರ ರವೀಶ್ ಕುಮಾರ್ ಹೇಳಿದರು. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ವಿದೇಶ ಸಚಿವ ಶಾ. ಮೆಹ್ಮೂದ್ ಕುರೇಶಿಯವರ ಅಭಿನಂದನಾ ಸಂದೇಶಕ್ಕೆ ರಾಜತಾಂತ್ರಿಕ ಶಿಷ್ಟಾಚಾರದಂತೆ ಉತ್ತರವನ್ನು ನೀಡಲಾಗಿದೆ. ಚರ್ಚೆ ನಡೆಸುವ ಯಾವ ಕ್ರಮಕ್ಕೂ ಮುಂದಾಗಿಲ್ಲ ಎಂದು ಭಾರತದ ವಿದೇಶ ವಕ್ತಾರ ಸ್ಪಷ್ಟಪಡಿಸಿದರು.

ಕಳೆದವಾರ ಕಿರ್ಗಿಸ್ಥಾನದ ಬಿಸ್ಕೊದಲ್ಲಿ ನಡೆದ ಶಾಂಗೈ ಶೃಂಗದಲ್ಲಿ ಪುನಃ ಪ್ರಧಾನಿಯಾಗಿ ಆಯ್ಕೆಯಾದ ಮೋದಿಗೆ ಇಮ್ರಾನ್ ಖಾನ್ ಅಭಿನಂದನಾ ಸಂದೇಶ ಹಸ್ತಾಂತರಿಸಿದ್ದರು. ಇದಕ್ಕೆ ಸಲ್ಲಿಸಿದ ಉತ್ತರದಲ್ಲಿ ವಲಯದ ಸಂಬಂಧ ಗಟ್ಟಿಗೊಳಿಸುವ ನಿಲುವನ್ನು ಭಾರತ ಪ್ರಧಾನಿ ಮತ್ತು ವಿದೇಶ ಸಚಿವರು ಸ್ವೀಕರಿಸಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು.