ಗೆಳೆಯನ ಪತ್ನಿಯನ್ನು ಮದುವೆಯಾಗುವುದಕ್ಕಾಗಿ ಗೆಳಯನನ್ನೇ ಕೊಲೆ ಮಾಡಿದ ಯುವಕ

0
1232

ಹೊಸದಿಲ್ಲಿ, ಜೂ. 26: ಗೆಳೆಯನ ಪತ್ನಿಯನ್ನು ಪಡೆಯುವುದಕ್ಕಾಗಿ ಗೆಳೆಯನನ್ನು ಕೊಲೆ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ದಿಲ್ಲಿಯ ನಿವಾಸಿ ಗುಲ್‍ ಕೇಶ್ ಎಂಬಾತ ಜೂನ್ 24ರಂದು ದಿಲ್‍ಬೀರ್ (30) ಎಂಬಾತನನ್ನು ಕೊ೦ದು ಝಕರಿಯ ರೈಲ್ವೆ ನಿಲ್ದಾಣದ ಸಮೀಪ ಎಸೆದಿದ್ದನು. ದಿಲ್‍ ಬೀರನ ತಲೆಗೆ ಹೊಡೆದು ಪ್ರಜ್ಞೆ ಕಳಕೊಂಡ ನಂತರ ರೈಲ್ವೆ ಪಟ್ಟಿಗೆ ಎಸೆದು ಹೋಗಿದ್ದನು. ನಂತರ ರೈಲಿನಡಿಗೆ ಬಿದ್ದು ದಿಲ್ಬೀರ್ ನ ಪ್ರಾಣ ಹೋಗಿತ್ತು. ಪ್ರೇಂ ನಗರ ಪಥಕ್ ಸಮೀಪ ರೈಲು ಢಿಕ್ಕಿಯಾಗಿ ಮೃತಪಟ್ಟ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆಯಾಗಿದೆ ಎಂದು ಮೊದಲು ನಂಬಲಾಗಿತ್ತು. ಈ ವಿಷಯವನ್ನು ಗುಲ್‍ ಕಿಶೋರ್ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದ. ಆದರೆ ಘಟನೆಯ ಕುರಿತು ಸಂದೇಹ ಗೊಂಡಿದ್ದ ಪೊಲೀಸರು ಗುಲ್‍ ಕಿಶೋರ್ ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ದಿಲ್ಬೀರ್ ಹತ್ಯೆ ಮಾಡಿದ್ದು ಬಹಿರಂಗವಾಗಿದೆ.

ದಿಲ್ಬೀರನ ಪತ್ನಿಯೊಂದಿಗೆ ಗುಲ್‍ ಕಿಶೋರ್ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಆಕೆಯನ್ನು ಮದುವೆಯಾಗಲು ಕೂಡಾ ಬಯಸಿದ್ದ. ಆದರೆ ಮಹಿಳೆಯು ಮದುವೆಯಾಗಲು ನಿರಾಕರಿಸಿದ್ದಳು. ನಂತರ ಗೆಳೆಯ ಗುಲ್‍ ಕಿಶೋರನ ತಲೆಗೆ ಹೊಡೆದು ರೈಲುಪಟ್ಟಿಗೆ ಎಸೆದಿದ್ದ. ಕೊಲೆ ಕೃತ್ಯದಲ್ಲಿ ದಿಲ್‍ಬೀರ್ ಪತ್ನಿ ಅಥವಾ ಇತರ ಯಾರಾದರೂ ಶಾಮೀಲಾಗಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.