ಲಕ್ನೊ, ಜೂ. 26: ಅಖಿಲೇಶ್ ಯಾದವ್ ಈಗ ಮುಸ್ಲಿಂ ಮತ್ತು ಯಾದವರಿಗೆ ಸಂಬಂಧಿಸಿದ ಡೇಟಾವೊಂದನ್ನು ತಯಾರಿಸಲು ಸೂಚಿಸಿದ್ದಾರೆ. ಪ್ರತಿಯೊಂದು ವಿಧಾನಸಭೆಯ ಕೋರ್ ಮತದಾರರ ಲೆಕ್ಕವನ್ನು ತೋರಿಸಲಾಗುವುದು. ಎಷ್ಟು ಪ್ರಾಮಾಣಿಕವಾಗಿ ಸಖ್ಯವನ್ನು ನಿರ್ವಹಿಸಿದರು ಎಂದು ತೋರಿಸುವುದು ಅವರ ಉದ್ದೇಶ ಎನ್ನಲಾಗಿದೆ. ಆದ್ದರಿಂದ ಅವರು ಮೌನವಾಗಿದ್ದಾರೆ. ‘ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬಹುದಾಗಿದ್ದ ಸೀಟುಗಳಲ್ಲಿ ಸೋತಿರುವುದಕ್ಕೆ ಮಾಯಾವತಿ ಆಕ್ರೊಶ ಹೊಂದಿದ್ದಾರೆ. ಹನ್ನೆರಡು ವಿಧಾನಸಭಾ ಸ್ಥಾನಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಮತ್ತು 2022ರಲ್ಲಿ ನಡೆಯುವ ಚುನಾವಣೆಗಾಗಿ ಸಮಾಜವಾದಿ ಪಾರ್ಟಿ ಸುಧಾರಣೆ ತರಲು ಯತ್ನಿಸುತ್ತಿದೆ. ಮಾಯಾವತಿ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಸಮಾಜವಾದಿ ಪಾರ್ಟಿಯ ವಿರುದ್ಧ ಕಿಡಿಕಿಡಿಯಾಗಿದ್ದು ಸಖ್ಯದಿಂದ ದೂರ ಸರಿದಿದ್ದಾರೆ.
ಇಂಡಿಯ ಟಿವಿ ನ್ಯೂಸ್ ಡಾಟ್ ಕಾಮ್ ಪ್ರಕಾರ ಸಮಾಜವಾದಿ ಪಕ್ಷದ ಮುರಾದಾಬಾದ್ ಸಂಸದ ಡಾ. ಎಸ್.ಟಿ. ಹಸನ್ ಮಾಯಾವತಿಯ ಟೀಕೆಗೆ ಪ್ರತಿಕ್ರಿಯೆ ನೀಡಿದ್ದು ಮೊದಲು ಕೂಡ ನಾವು ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದೇವೆ. ಮುಂದೆಯೂ ಸ್ವತಂತ್ರವಾಗಿ ಎದುರಿಸುತ್ತೇವೆ. ಅಖಿಲೇಶ್ ಯಾದವ್ ಫೋನ್ ಮಾಡಿ ಹಿಂದೂ ಮುಸ್ಲಿಂ ವಿಚಾರ ಮಾತಾಡುವುದಿಲ್ಲ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ಸಮಾಜವಾದಿ ಪಕ್ಷಕ್ಕೆ ಮತ ಹಾಕಿದ್ದಾರೆ. ನಮ್ಮ ಮತಗಳು ಬಿಎಸ್ಪಿಗೂ ಸಿಕ್ಕಿದೆ. ಮಾಯಾವತಿ ಹಾಗೆ ಯಾಕೆ ಟೀಕಿಸಿದ್ದಾರೆ ಎಂದು ಅವರೇ ಹೇಳಬೇಕು. ಬಿಎಸ್ಪಿಗೆ ಒಂದು ಸೀಟೂ ಇರಲಿಲ್ಲ. ಈಗ ಹತ್ತು ಸೀಟುಗಳಿವೆ. ನಮ್ಮ ಪಾರ್ಟಿಗೆ ಜನಬೆಂಬಲವಿದೆ ಎಂದು ಹಸನ್ ಹೇಳಿದ್ದಾರೆ.












