ಮರಗಳ ಮಧ್ಯೆ ಎಸೆದು ಹೋದ ಮಗುವಿಗೆ ಬೇಬಿ ಇಂಡಿಯ ಎಂದು ಹೆಸರಿಸಿದ ಅಮೆರಿಕದ ಪೊಲೀಸರು- ವೀಡಿಯೊ

0
1309

ವಾಷಿಂಗ್ಟನ್, ಜೂ. 27: ಅಮೆರಿಕದ ಜಾರ್ಜಿಯದಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ನವಜಾತ ಮಗು ಎಸೆದು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮಗುವಿಗೆ ಪೊಲೀಸರು ಬೇಬಿ ಇಂಡಿಯ ಎಂದು ಹೆಸರು ಇರಿಸಿದ್ದಾರೆ. ಜೂನ್ ಆರರಂದು ಮಗುವನ್ನು ಯಾರೋ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಎಸೆದು ಹೋಗಿದ್ದರು. ಮಗುವಿನ ಹೆತ್ತವರನ್ನು ಪತ್ತೆಹಚ್ಚುವ ಸಲುವಾಗಿ ಮಗುವಿನ ವೀಡಿಯೊವನ್ನು ಪೊಲೀಸರು ಹೊರಬಿಟ್ಟಿದ್ದಾರೆ.

ಮರಗಳ ನಡುವೆ ಮಗುವನ್ನು ಎಸೆಯಲಾಗಿತ್ತು. ಮಗು ಈಗ ಪೊಲೀಸಧಿಕಾರಿಗಳ ವಶದಲ್ಲಿದೆ. ತಾತ್ಕಾಲಿಕವಾಗಿ ಪೊಲೀಸರು ಮಗುವಿಗೆ ಬೇಬಿ ಇಂಡಿಯ ಎಂದು ಹೆಸರು ಇರಿಸಿದ್ದಾರೆ. ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ರಕ್ಷಿಸುತ್ತಿರುವ ವೀಡಿಯೊವನ್ನು ಈಗ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಮಗುವಿನ ತಾಯಿಯನ್ನು ಹುಡುಕುವ ಉದ್ದೇಶದಿಂದ ವೀಡಿಯೊವನ್ನು ಹೊರಗೆ ಬಿಟ್ಟಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಬೇಬಿ ಇಂಡಿಯಾಳನ್ನು ದತ್ತು ಪಡೆಯಲು ಹಲವಾರು ಮಂದಿ ಮುಂದೆ ಬಂದಿದ್ದು ಪೊಲೀಸರನ್ನು ಸಂಪರ್ಕಿಸಿಸಿದ್ದಾರೆ.