ವಾಷಿಂಗ್ಟನ್, ಜೂ. 27: ಅಮೆರಿಕ ಮತ್ತು ಚೀನದ ನಡುವೆ ಪರಸ್ಪರ ವ್ಯಾಪಾರ ವಿವಾದ ಮುಂದುವರಿದಿದ್ದು ಇದರ ಪರಿಣಾಮವಾಗಿ ಬೈಬಲ್ ಗೆ ದರ ಹೆಚ್ಚಳವಾಗುವ ಆತಂಕ ಧರ್ಮವಿಶ್ವಾಸಿಗಳಲ್ಲಿ ಸೃಷ್ಟಿಯಾಗಿದೆ. ಅಮೆರಿಕ ರಫ್ತು ತೆರಿಗೆ ಹೆಚ್ಚಿಸಿದೆ. ಇದೇ ರೀತಿ ಚೀನಾ ಪ್ರತ್ಯುತ್ತರ ನೀಡಿದೆ.
ಅಮೆರಿಕ ರಫ್ತಿಗೆ ತೆರಿಗೆ ಹೆಚ್ಚಿಸಿದ್ದನ್ನು ವಿರೋಧಿಸಿ ಚೀನ ಕೂಡ ರಫ್ತಿನ ಮೇಲೆ ಹೆಚ್ಚು ತೆರಿಗೆಯನ್ನು ಹೊರಿಸಲು ಸಜ್ಜಾಗಿದೆ. ಬೈಬಲ್ ಚೀನದಿಂದ ಅಮೆರಿಕಕ್ಕೆ ತರಲಾಗುತ್ತಿದೆ. ಚೀನದ ಉತ್ಪನ್ನಗಳ ತೆರಿಗೆ ಹೆಚ್ಚಿಸಿದರೆ ಬೈಬಲ್ ನ ಬೆಲೆಯೂ ಹೆಚ್ಚುವುದು ಸಹಜವೆಂದು ಧರ್ಮವಿಶ್ವಾಸಿಗಳು ಹೇಳುತ್ತಿದ್ದಾರೆ. ಅಮೆರಿಕದ ಕ್ರೈಸ್ತ ಸಮುದಾಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಕ್ರಮದಿಂದ ತೊಂದರೆ ಅನುಭವಿಸುವಂತಾಗಿದೆ ಎಂದಿದ್ದಾರೆ.












