ಸನ್ಮಾರ್ಗ ವಾರ್ತೆ
ಮೋದಿ ಸರಕಾರವನ್ನು ಪತ್ರಕರ್ತ ರಾಜ್ ದೀಪ್ ಸರ್ ದೇಸಾಯಿ ತೀವ್ರ ತರಾಟೆಗೆ ಎತ್ತಿಕೊಂಡಿದ್ದಾರೆ. ಗೋವಾ ಕ್ಲಬ್ನಲ್ಲಿ ಉಂಟಾದ ಬೆಂಕಿ ಅನಾಹುತ, ಇಂಡಿಗೋ ವಿಮಾನಗಳ ಸಮಸ್ಯೆ ಮತ್ತು ದೇಶದಲ್ಲಿ ಎದುರಾಗಿರುವ ವಾಯುಮಾಲಿನ್ಯದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ಮಾಡಲು ಕೇಂದ್ರ ಸರಕಾರ ತಯಾರಿದೆಯೇ ಎಂದು ಅವರು ಎಕ್ಸ್ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ವಂದೇ ಮಾತರಂನ ಬಗ್ಗೆ ಲೋಕಸಭೆಯಲ್ಲಿ ಯಾವ ಕಾರಣಕ್ಕಾಗಿ 10 ಗಂಟೆಗಳ ಕಾಲ ಚರ್ಚೆ ನಡೆಸಿದ್ದೀರಿ ಎಂದು ರಾಜ್ ದೀಪ್ ಪ್ರಶ್ನಿಸಿದ್ದಾರೆ.
ಈ ನಡುವೆ ನೆಹರು ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಮತ್ತು ಅವರನ್ನು ಹಣಿಯುವುದಕ್ಕೆ ಹೊಸ ಆಯುಧವನ್ನು ಉತ್ಪಾದಿಸಲು ಕೇಂದ್ರ ಸರಕಾರ ಶ್ರಮಿಸುತ್ತಿದೆ ಎಂದು ರಾಜ್ ದೀಪ್ ಸರ್ ದೇಸಾಯಿ ಹೇಳಿದ್ದಾರೆ.
ಗೋವಾ ಕ್ಲಬ್ ನಲ್ಲಿ ಬೆಂಕಿ ಅನಾಹುತವಾಗಿ 25 ಮಂದಿ ಸಾವಿಗಿಡಾಗಿದ್ದಾರೆ ಇಂಡಿಗೋ ವಿಮಾನದ ಅವ್ಯವಸ್ಥೆಯಿಂದ ಸಾವಿರಾರು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅನೇಕರು ಕಣ್ಣೀರು ಹಾಕಿದ್ದಾರೆ. ಅತ್ಯಂತ ಭೀಕರ ದುರಾಡಳಿತಕ್ಕೆ ಸಾಕ್ಷಿ ಇದು ಎಂದವರು ಹೇಳಿದ್ದಾರೆ.
ಆದರೆ ನಮ್ಮ ಲೋಕಸಭಾ ಸಂಸದರು ಯಾವುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂಬುದನ್ನು ಊಹಿಸಬಲ್ಲಿರಾ? ವಂದೇ ಮಾತರಂನ ಸುತ್ತ 10 ಗಂಟೆಗಳ ಚರ್ಚೆ ಯಾವ ಕಾರಣಕ್ಕೆ? ಯಾಕೆಂದರೆ ಈ ವಂದೇ ಮಾತರಂನ ಮೂಲಕ ಕೇಂದ್ರ ಸರಕಾರಕ್ಕೆ ನೆಹರು ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಮತ್ತು ಹೊಸಹೊಸ ಆಯುಧವನ್ನು ಸೃಷ್ಟಿ ಮಾಡಲು ಸುಲಭವಾಗುತ್ತದೆ. ಈ ಕಾರಣಕ್ಕಾಗಿ ಇದರ ಮೇಲೆ ಚರ್ಚೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ.
ವಂದೇ ಮಾತರಂ ಗೆ 150 ವರ್ಷಗಳಾದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಇದನ್ನು ಉದ್ಘಾಟಿಸಿದ್ದು ಪ್ರಧಾನಿ ನರೇಂದ್ರ ಮೋದಿ ನಾಳೆ ರಾಜ್ಯಸಭೆಯಲ್ಲೂ ವಂದೇ ಮಾತರಂ ಸುತ್ತ ಚರ್ಚೆ ನಡೆಯಲಿದೆ. ಅಮಿತ್ ಶಾ ಈ ಚರ್ಚೆಯನ್ನು ಉದ್ಘಾಟಿಸಲಿದ್ದಾರೆ. ಪಾರ್ಲಿಮೆಂಟ್ ನಲ್ಲಿ ವಂದೇ ಮಾತರಂ ಚರ್ಚೆ ನಡೆಯುವ ಮೂಲಕ ನೆಹರು ಎಂಬ ನಾಯಕ ಬೆತ್ತಲಾಗಲಿದ್ದಾರೆ ಎಂದು ಬಿಜೆಪಿ ನಾಯಕ ಸಂಬಿತ ಪಾತ್ರ ನಿನ್ನೆ ಪತ್ರಕರ್ತರೊಂದಿಗೆ ಹೇಳಿದ್ದರು.












