ಸನ್ಮಾರ್ಗ ವಾರ್ತೆ
ಗುಜರಾತ್ನ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೆವಾನಿ ಅವರ ಹೇಳಿಕೆಯು ಭಾರಿ ಚರ್ಚೆಗೆ ಕಾರಣವಾಗಿದೆ. ದಿ ಟೆಲಿಗ್ರಾಫ್ಗೆ ನೀಡಿದ ಸಂದರ್ಶನದಲ್ಲಿ ಅವರು ಗುಜರಾತಿನಲ್ಲಿ ರಾಜಕಾರಣಿಗಳು ಮತ್ತು ಐಪಿಎಸ್ ಅಧಿಕಾರಿಗಳ ನಡುವಿನ ಬೆಚ್ಚಿ ಬೀಳಿಸುವ ಸಂಬಂಧವನ್ನು ಬಹಿರಂಗಕ್ಕೆ ತಂದಿದ್ದಾರೆ. ಗುಜರಾತ್ ನಲ್ಲಿ ಮಧ್ಯ ಮತ್ತು ಡ್ರಗ್ಸ್ ಯಥೇಚ್ಛವಾಗಿ ಸಿಗುತ್ತಿರುವುದರ ಹಿಂದಿನ ಮರ್ಮವನ್ನು ಬಿಚ್ಚಿಟ್ಟಿದ್ದಾರೆ.
ಗುಜರಾತ್ನ ಸಚಿವರು ಮತ್ತು ನೂರಕ್ಕಿಂತಲೂ ಅಧಿಕ ಐಪಿಎಸ್ ಅಧಿಕಾರಿಗಳು ಜೊತೆ ಸೇರಿ ರಾಜ್ಯದಲ್ಲಿ ಬಹಳ ದೊಡ್ಡ ಮಾದಕ ಮಾಫಿಯಾ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಾನೂನನ್ನು ಬಳಸಿಕೊಂಡು ಮಧ್ಯಪ್ರದೇಶ ಮಹಾರಾಷ್ಟ್ರ ರಾಜಸ್ಥಾನ್ ಮುಂತಾದ ರಾಜ್ಯಗಳಿಂದ ಕೋಟ್ಯಾಂತರ ರೂಪಾಯಿಯ ಮಧ್ಯವನ್ನು ಖರೀಧಿಸಿ ಅದನ್ನು ಭಾರಿ ಬೆಲೆಗೆ ಮಾರಾಟ ಮಾಡಿ ದುಡ್ಡು ಗಳಿಸುತ್ತಿದ್ದಾರೆ. ಅಲ್ಲದೆ ಉಳಿದ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮತ್ತು ಪೊಲೀಸ್ ಇನ್ಸ್ಪೆಕ್ಟರ್ಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ಇದೇ ಹಣವನ್ನು ಇವರು ರಿಯಲ್ ಎಸ್ಟೇಟ್ ಮೂಲಕ ಬಿಳಿ ಗೊಳಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಭಾರಿ ದೊಡ್ಡ ಮಟ್ಟದಲ್ಲಿ ಹಣಕಾಸು ಅವ್ಯವಹಾರದಲ್ಲಿ ನಿರತರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ವಿಸ್ತೃತ ಸಂದರ್ಶನವನ್ನು ಟೆಲಿಗ್ರಾಫ್ ಪ್ರಕಟಿಸಿದೆ.












